ಮಂಗಳೂರು: ​ಟೈಲರ್ ಅಸೋಸಿಯೇಶನ್ ಬೇಡಿಕೆ ಈಡೇರಿಸಲು ಶಾಸಕ ಲೋಬೊರಿಂದ ಸಿಎಂಗೆ ಮನವಿ

Update: 2017-02-16 16:15 GMT

ಮಂಗಳೂರು, ಫೆ. 16: ಸರಕಾರಿ ಸೌಲಭ್ಯಗಳಿಂದ ವಂಚಿತರಾಗಿರುವ ಕರ್ನಾಟಕ ಸ್ಟೇಟ್ ಟೈಲರ್ಸ್‌ ಅಸೋಸಿಯೇಶನ್‌ನ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕ ಜೆ.ಆರ್.ಲೋಬೊ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಅಸಂಘಟಿತ ಹೊಲಿಗೆ ಕೆಲಸಗಾರರಿಗೆ ಭವಿಷ್ಯ ನಿಧಿ (ಪಿಎಫ್) ಮತ್ತು ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಹೊಲಿಗೆ ಸಂಘಟನೆಯ ಸದಸ್ಯರು ಪಿಎಫ್‌ಗೆ ತಿಂಗಳಿಗೆ 100 ರೂ. ವಂತಿಗೆ ನೀಡಲು ಸಿದ್ಧರಿದ್ದಾರೆ.

ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾಜಿ ಕಾರ್ಮಿಕ ಸಚಿವ ಪರಮೇಶ್ವರ್ ನಾಯ್ಕಿ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ನಿರ್ದೇಶಕ ಪ್ರವೀಣ್ ಸಾಲ್ಯಾನ್, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಶಾಸಕರ ಆಪ್ತ ಸಹಾಯಕ ಲತೇಶ್ ಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News