×
Ad

ಸುನ್ನೀ ಸಂದೇಶದಿಂದ ಫೆ.17ರಂದು ಪ್ರಚಾರ ಸಭೆ

Update: 2017-02-16 21:47 IST

ಮಂಗಳೂರು, ಫೆ. 16: ಸುನ್ನೀ ಸಂದೇಶ ಮಾಸ ಪತ್ರಿಕೆಯ 15ನೆ ವಾರ್ಷಿಕ ಮಹಾ ಸಂಭ್ರಮವು ಫೆ.18ರಂದು ನಗರದ ನೆಹರೂ ಮೈದಾನದಲ್ಲಿ ಮಾದಕ ದ್ರವ್ಯದ ವಿರುದ್ಧ ನಡೆಯುವ ಸಮಾರಂಭದಲ್ಲಿ ಅಂತರ್‌ರಾಷ್ಟ್ರೀಯ ಭಾಷಣಗಾರ ಎ. ಎಂ. ನೌಶಾದ್ ಬಾಖವಿ ಭಾಗವಹಿಸುವ ಹಿನ್ನೆಲೆಯಲ್ಲಿ ಅದರ ಪ್ರಚಾರಾರ್ಥ ಫೆಬ್ರವರಿ 17ರಂದು ಜುಮಾ ನಮಾಝ್ ನಂತರ ಎಲ್ಲಾ ಮಸೀದಿಗಳಲ್ಲಿ ಪ್ರಚಾರ ಮಾಡಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಸ್ವಾಗತ ಸಮಿತಿಯ ಅಧ್ಯಕ್ಷ ಎ. ಎಚ್. ನೌಷಾದ್ ಹಾಜಿ ಸೂರಲ್ಪಾಡಿ ಹಾಗೂ ದ.ಕ. ಜಿಲ್ಲಾ ಜಮೀಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಕೆ. ಎಲ್. ಉಮರ್ ದಾರಿಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News