×
Ad

ಬ್ರಹ್ಮಾವರ: ಎಟಿಎಂ ಕಳವಿಗೆ ಯತ್ನ

Update: 2017-02-16 21:49 IST

ಬ್ರಹ್ಮಾವರ, ಫೆ.16: ನೀಲಾವರ ಗ್ರಾಮ ಕುಂಜಾಲಿನಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಶಾಖೆಯ ಎಂಟಿಎಂಗೆ ಬುಧವಾರ ಬೆಳಗಿನ ಜಾವ 2:00ರಿಂದ 4:00 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಎಟಿಎಂ ನಲ್ಲಿರುವ ಹಣವನ್ನು ಕಳ್ಳತನ ಮಾಡುವ ಉದ್ದೇಶದಿಂದ ಎಟಿಎಂ ಯಂತ್ರವನ್ನು ಗ್ಯಾಸ್ ಕಟ್ಟರ್‌ನಿಂದ ತುಂಡು ಮಾಡಿ ಕಳ್ಳತನಕ್ಕೆ ವಿಫಲ ಪ್ರಯತ್ನ ನಡೆಸಿದ್ದಾರೆ ಎಂದು ಬ್ಯಾಂಕಿನ ಕುಂಜಾಲು ಶಾಖಾ ಪ್ರಬಂಧಕ ಕೆ.ದಿನಕರ ರಾವ್ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಎಟಿಎಂ ಯಂತ್ರದಲ್ಲಿದ್ದ ನಗದು ಯಥಾಸ್ಥಿತಿಯಲ್ಲಿದೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News