ರೈಲಿನಡಿ ಬಿದ್ದು ಸಾವು
Update: 2017-02-16 21:50 IST
ಕೋಟ, ಫೆ.16: ಮನೆಯಿಂದ ಕಾಣೆಯಾದ ದನವನ್ನು ಹುಡುಕಿಕೊಂಡು ಹೋದ ಯುವಕನೊಬ್ಬ ಅಕಸ್ಮಿಕವಾಗಿ ರೈಲು ಬಡಿದು ಮೃತಪಟ್ಟ ಘಟನೆ ಕಾವಡಿ ಗ್ರಾಮದ ಹವರಾಲು ಎಂಬಲ್ಲಿಂದ ವರದಿಯಾಗಿದೆ.
ಹವರಾಲಿನ ಸಂತೋಷ ಶೆಟ್ಟಿ ಎಂಬವರ ಪುತ್ರ ಸಂಪತ್‌ಕುಮಾರ್ ಶೆಟ್ಟಿ (27) ಮನೆಗೆ ಬಾರದ ದನವನ್ನು ಹುಡುಕಿಕೊಂಡು ಬುಧವಾರ ಸಂಜೆ 4:00 ಗಂಟೆ ಸುಮಾರಿಗೆ ಮನೆಯ ಸಮೀಪದ ರೈಲ್ವೆ ಬ್ರಿಜ್ ಬಳಿ ಹೋದಾಗ ಕಾರವಾರದಿಂದ ಮಂಗಳೂರಿಗೆ ತೆರಳುತಿದ್ದ ರೈಲು ಅವರ ತಲೆಗೆ ಅಕಸ್ಮಿಕವಾಗಿ ಬಡಿದು ತೀವ್ರ ಸ್ವರೂಪದ ಗಾಯವಾಗಿ ರೈಲ್ವೆ ಹಳಿ ಬಳಿಯೇ ಮೃತಪಟ್ಟಿರುವುದಾಗಿ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.