ಸಂದೇಶ ಯಾತ್ರೆಗೆ ಸ್ವಾಗತ
Update: 2017-02-16 21:52 IST
ಸಂದೇಶ ಯಾತ್ರೆಗೆ ಸ್ವಾಗತ
ಮಂಗಳೂರು: ಸುನ್ನೀ ಸಂದೇಶ ಮಾಸ ಪತ್ರಿಕೆಯ 15ನೇ ರ್ವಾಕ ಮಹಾ ಸಂಭ್ರಮವು ಫೆ. 18ರಂದು ನೆಹರು ಮೈದಾನದಲ್ಲಿ ನಡೆಯಲಿದ್ದು, ಇದರ ಪ್ರಚಾರಾರ್ಥವಾಗಿ ಫೆಬ್ರವರಿ 8ರಂದು ಉಳ್ಳಾಲ ದರ್ಗಾ ಝಿಯಾರತ್‌ನೊಂದಿಗೆ ಪ್ರಾರಂಭಗೊಂಡ ಪ್ರಚಾರ ಜಾಥವು ಉಮರ್ ದಾರಿಮಿ ಹಾಗೂ ಕುಕ್ಕಿಲ ದಾರಿಮಿ ಅವರ ನಾಯಕತ್ವದಲ್ಲಿ ಗುರುವಾರ ಬೆಳಗ್ಗೆ ಬಿ. ಸಿ. ರೋಡ್ ಜಂಕ್ಷನ್‌ನಿಂದ ಪ್ರಾರಂಭಗೊಂಡ ವಾಹನ ಜಾಥಾವು ಬಂಟ್ವಾಳ, ಗುರುಪುರ, ಮುಲ್ಲಾರ್‌ಪಟ್ಣ, ತೋಡಾರ್, ಮೂಡಬಿದ್ರೆ ತಲುಪಿತು. ಈ ಸಂದರ್ಭದಲ್ಲಿ ಅಲಲ್ಲಿ ಸಂದೇಶ ಯಾತ್ರೆಯನ್ನು ಸ್ವಾಗತಿಸಲಾಯಿತು.
ಉಮರ್ ದಾರಿಮಿ, ಕುಕ್ಕಿಲ ದಾರಿಮಿ, ಸಿದ್ದೀಕ್ ಫೈಝಿ ಮೊದಲಾದವರು ಜಾಥಾ ನೇತಾರರಾಗಿ ಉಪಸ್ಥಿತರಿದ್ದರು. ಊರಿನ ಉಲಮಾ ಉಮರ ನಾಯಕರು, ಸಮಸ್ತ ಕಾರ್ಯಕರ್ತರು ಉಪಸ್ಥಿತರಿದ್ದರು ಎಂದು ಮುಸ್ತಫಾ ಫೈಝಿ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.