ನಾಳೆ ತುಳು ಅಕಾಡಮಿ ಗೌರವ ಪ್ರಶಸ್ತಿ ಪ್ರದಾನ

Update: 2017-02-16 18:18 GMT

ಮಂಗಳೂರು, ಫೆ.16: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ 2016ನೆ ಸಾಲಿನ ‘ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ಸಮಾರಂಭ’ವು ಫೆ.18ರಂದು ಅಪರಾಹ್ನ 3:30ಕ್ಕೆ ನಗರದ ಉರ್ವಸ್ಟೋರ್‌ನಲ್ಲಿರುವ ತುಳುಭವನದ ‘ಸಿರಿಚಾವಡಿ’ಯಲ್ಲಿ ನಡೆಯಲಿದೆ.

ಶಾಸಕ ಜೆ.ಆರ್.ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗೌರವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುದ್ದು ಮೂಡುಬೆಳ್ಳೆ (ಸಾಹಿತ್ಯ), ಆನಂದ ಶೆಟ್ಟಿ (ನಾಟಕ), ತಮ್ಮ ಲಕ್ಷ್ಮಣ (ಸಿನೆಮಾ) ಗೌರವ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ (ಅಧ್ಯಯನ ವಿಭಾಗ), ಯೋಗೀಶ ರಾವ್ ಚಿಗುರುಪಾದೆ (ಕವನ ವಿಭಾಗ) ಶಶಿರಾಜ್ ಕಾವೂರು (ನಾಟಕ ವಿಭಾಗ) ಪುಸ್ತಕ ಬಹುಮಾನ ಪಡೆಯಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 2:30ರಿಂದ 3:30ರವರೆಗೆ ಮಾಸ್ಟರ್ಸ್‌ ಮೀಯಪದವು ಬಳಗದಿಂದ ‘ಉಳ್ಳಾಲದ ರಾಣಿ ಅಬ್ಬಕ್ಕ’ ತುಳು ದೃಶ್ಯ, ನೃತ್ಯ ರೂಪಕ ನಾಟಕ’ ನಡೆಯಲಿದೆ ಎಂದು ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News