‘ಸೌಜನ್ಯಾಳ ಮಾವ ವಿಠಲ ಗೌಡರ ತನಿಖೆಗೊಳಪಡಿಸಿ’
ಮಂಗಳೂರು, ಫೆ.16: ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಹತ್ಯೆಯ ಸತ್ಯಾಂಶ ಹೊರಬೀಳಬೇಕಾದರೆ ಆಕೆಯ ಮಾವ ವಿಠಲ ಗೌಡರನ್ನು ತನಿಖೆಗೊಳಪಡಿಸಬೇಕು ಎಂದು ಶಂಕಿತ ಆರೋಪಿಗಳನ್ನೆಲಾದ ಮಲ್ಲಿಕ್ ಜೈನ್, ಉದಯ್ ಜೈನ್, ೀರಜ್ ಕೆಲ್ಲ ಆಗ್ರಹಪಡಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈ ಮೂವರು ಸೌಜನ್ಯಾಳ ಹತ್ಯೆಗೆ ಸಂಬಂಸಿ ಪೊಲೀಸ್ ಇಲಾಖೆಯಲ್ಲಿ ನಮ್ಮ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಕೊಲೆ ನಡೆದ ಒಂದು ವರ್ಷದ ಬಳಿಕ ನಮ್ಮ ಮೇಲೆ ಕೆಲವು ವ್ಯಕ್ತಿಗಳು ಮತ್ತು ಸಂಘಟನೆಯವರು ಆರೋಪ ಹೊರಿಸಿದ್ದಾರೆ.
ಆ ಹಿನ್ನೆಲೆಯಲ್ಲಿ ನಾವು 2014ರಲ್ಲೇ ‘ಕಾನೂತ್ತೂರು ದೇವಾಲಯ’ಕ್ಕೆ ದೂರು ನೀಡಿದ್ದೇವೆ. ಈ ಪ್ರಕರಣಕ್ಕೆ ಸಂಬಂಸಿ ಈಗಾಗಲೇ ನಮ್ಮನ್ನು ಬೆಳ್ತಂಗಡಿ ಮತ್ತು ಬೆಂಗಳೂರಿನಲ್ಲಿ ಸಿಒಡಿ ಪೊಲೀಸರು ತನಿಖೆ ನಡೆಸಿದ್ದಾರೆ. ಆ ಬಳಿಕ ಸಿಐಡಿ ಪೊಲೀ ಸರೂ ತನಿಖೆ ನಡೆಸಿದ್ದಾರೆ. ನಮ್ಮ ರಕ್ತ ಪರೀಕ್ಷೆ, ಡಿಎನ್‌ಎ ಮತ್ತು ಮಂಪರು ಪರೀಕ್ಷೆಯನ್ನೂ ಮಾಡಲಾಗಿದೆ. ಎಲ್ಲದಕ್ಕೂ ನಾವು ಸಹಕಾರ ನೀಡಿದ್ದೇವೆ ಎಂದರು.
ಸೌಜನ್ಯಾಳ ಹೆತ್ತವರ ಪರವಾಗಿ ಮೊನ್ನೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ನೀಡಿದ ಹೇಳಿಕೆಯು ಸಿಬಿಐನ ಮುಂದುವರಿದ ತನಿಖೆಯ ದಾರಿ ತಪ್ಪಿಸುವಂತಾಗಿದೆ. ಹಾಗಾಗಿ ಸೌಜನ್ಯಾಳ ಮಾವ ವಿಠಲ ಗೌಡರನ್ನು ತನಿಖೆಗೊಳಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿದಿನ ನಾನು ಸೌಜನ್ಯಾಳಿಗೆ ಹೊಟೇಲ್‌ನಲ್ಲಿ ತಿಂಡಿಕೊಟ್ಟು ಮನೆಗೆ ನನ್ನ ವಾಹನ ದಲ್ಲೇ ಬಿಟ್ಟು ಬರುತ್ತಿದ್ದೆ. ನಾಪತ್ತೆಯಾದ ದಿನ ಆಕೆ ಒಬ್ಬಳೇ ಮನೆಗೆ ಹೋಗಿದ್ದಾಳೆ ಎಂದು ವಿಠಲ ಗೌಡ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು.
ಅಂದು ಮಳೆ ಸುರಿದಿದ್ದರೂ ವಿಠಲಗೌಡ ಯಾಕೆ ಸೌಜನ್ಯಾಳನ್ನು ತನ್ನ ವಾಹನದಲ್ಲಿ ಮನೆಗೆ ಬಿಡಲಿಲ್ಲ. ಆಕೆಗೆ 6 ಗಂಟೆಗೆ ತಿಂಡಿಕೊಟ್ಟವರು ಯಾರು? ನಾವು ಹತ್ಯೆ ಮಾಡಿದವರಾದರೆ ನಮ್ಮ ಕೈಯಿಂದ ಆಕೆ ತಿಂಡಿ ತೆಗೆದುಕೊಳ್ಳಲು ಸಾಧ್ಯವೇ? ಹಾಗಾಗಿ ವಿಠಲಗೌಡರನ್ನು ತನಿಖೆ ನಡೆಸಲೇಬೇಕು ಎಂದು ಮಲ್ಲಿಕ್ ಜೈನ್, ಉದಯ್ ಜೈನ್, ೀರಜ್ ಕೆಲ್ಲ ಒತ್ತಾಯಿಸಿದರು.