ವಿಕಾಸ್ ಕಾಲೇಜು: ‘ರೀಸರ್ಚ್ ಮೆತಡೋಲಜಿ’ ಕಾರ್ಯಾಗಾರ

Update: 2017-02-16 18:27 GMT

ಮಂಗಳೂರು, ಫೆ.16: ಗೆಟ್ ಸ್ಮಾರ್ಟ್ ಮತ್ತು ವಿಕಾಸ್ ಎಜುಕೇಶಎನ್ ಟ್ರಸ್ಟ್ ಇವರ ಸಹಯೋಗದಲ್ಲಿ ಗುರುವಾರ ‘ರೀಸರ್ಚ್ ಮೆತಡೋಲಜಿ’ ಎನ್ನುವ ಒಂದು ದಿನದ ಕಾರ್ಯಾಗಾರವು ವಿಕಾಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಹಾಗೂ ಕಾಲೇಜಿನ ಮುಖ್ಯಸ್ಥ ಜೆ.ಕೃಷ್ಣ ಪಾಲೆಮಾರ್ ಮಾತನಾಡಿ, ನಮ್ಮ ಸಂಸ್ಥೆ ಹಲವಾರು ಸಾಮಾಜಿಕ ಉಪಯುಕ್ತತೆಯ ಕಾರ್ಯವನ್ನು ಮಾಡುತ್ತಾ ಬಂದಿದೆ. ಯಾವುದೇ ವಿದ್ಯೆಯನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಿದರೆ ಆ ಕ್ಷೇತ್ರದಲ್ಲಿ ಪರಿಣತಿ ಸಾಧಿಸಲು ಸಾಧ್ಯ. ಸಮಾಜಮುಖಿಯಾಗಿರುವ ಈ ಕಾರ್ಯಕ್ರಮದ ಸದುಪಯೋಗವನ್ನು ಶಿಬಿರಾರ್ಥಿಗಳೆಲ್ಲರೂ ಪಡೆದುಕೊಳ್ಳಬೇಕು ಎಂದರು.

ಗೆಟ್ ಸ್ಮಾರ್ಟ್‌ನ ನಿರ್ದೇಶಕ ಡಾ.ಸುಫಲಾ ಎಸ್.ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕೆಎಂಸಿಯ ಡಿಪಾರ್ಟ್‌ಮೆಂಟ್ ಆಫ್ ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಅನಿಮೇಶ್ ಜೈನ್, ಡೋರಕ್ ಐ.ಟಿ.ಸೊಲ್ಯೂಷನ್ಸ್‌ನ ಶ್ರೀಶ ಪಂಡಿತ್, ವಿಕಾಸ್ ಎಜ್ಯು ಸೊಲ್ಯುಶನ್ಸ್‌ನ ನಿರ್ದೇಶಕ ಡಾ.ಅನಂತ್ ಪ್ರಭು ಜಿ. ಉಪಸ್ಥಿತರಿದ್ದರು.

ರಿಸರ್ಚ್ ಡಿಸೈನ್ ವಿಷಯದಲ್ಲಿ ಡಾ.ಅನಿಮೇಷ್ ಜೈನ್, ಕೆಎಂಸಿಯ ಅಸೋಸಿಯೇಟ್ ಪ್ರೊಫೆೆಸರ್ ಎಂ.ಎಸ್ ಕೋಟ್ಯಾನ್ (ಸ್ಯಾಂಪಲ್ ಸೈಝ್ ಆ್ಯಂಡ್ ಟೆಸ್ಟ್ ಸಿಗ್ನಿಫಿಕೇನ್ಸ್), ಡಾ.ಶೀತಲ್ ಉಳ್ಳಾಲ್ (ಎಥಿಕ್ಸ್ ಇನ್ ರೀಸರ್ಚ್), ಡಾ.ನಿತಿನ್ ಕುಮಾರ್ (ಬಿಬ್ಲಿಯೋಗ್ರಫಿ) ಮತ್ತಿತರು ಉಪನ್ಯಾಸ ನೀಡಿದರು. ವಿಕಾಸ್ ಪಪೂ ಕಾಲೇಜಿನ ಪ್ರಾಂಶುಪಾಲ ಟಿ.ರಾಜಾರಾಮ್ ರಾವ್ ಸ್ವಾಗತಿಸಿದರು. ಗೆಟ್ ಸ್ಮಾರ್ಟ್‌ನ ಸಹ ನಿರ್ದೇಶಕ ಡಾ.ಮಂಜುಳಾ ಅನಿಲ್ ರಾವ್ ವಂದಿಸಿದರು. ಪ್ರೀಕ್ಷಾ ಕಾರ್ಯ ಕ್ರಮ ನಿರೂಪಿಸಿದರು. ಮಂಗಳೂರಿನ ಅನೇಕ ಕಾಲೇಜುಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದು ಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News