ಫೆ.21: ಪಿ.ಎ. ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಅಂತರ್ ಕಾಲೇಜು ಉತ್ಸವ ‘ಟೆಕ್‌ಥೋನ್-17’
Update: 2017-02-16 23:59 IST
ಮಂಗಳೂರು, ಫೆ.16: ಕೊಣಾಜೆ ಸಮೀಪದ ನಡುಪದವಿನಲ್ಲಿರುವ ಪಿ.ಎ.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜ್ಯುಕೇಶನ್ ಸಹಯೋಗದೊಂದಿಗೆ ರಾಷ್ಟ್ರಮಟ್ಟದ ಅಂತರ್ ಕಾಲೇಜು ಉತ್ಸವ ‘ಟೆಕ್‌ಥೋನ್-17’ ಕಾರ್ಯಕ್ರಮ ಫೆ.21ರಂದು ಜರಗಲಿದೆ. ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ವೆಬ್ ಡಿಸೈನಿಂಗ್, ಟ್ರೆಜರ್‌ಹಂಟ್, 3ಡಿ ಮೊಡೆಲಿಂಗ್, ಟ್ರಸ್‌ಲೋಡಿಂಗ್, ಸರ್ಕ್ಯೂಟ್ ರಿಗಪ್ ಮೊದಲಾದ ವಿಶಿಷ್ಟ ಸ್ಪರ್ಧೆಗಳು ಜರಗಲಿರುವುದು. ಭಾಗವಹಿಸಲಿಚ್ಛಿಸುವ ಆಸಕ್ತ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಾಲೇಜಿನ ಜಾಲತಾಣದಿಂದ ಹೆಚ್ಚಿನ ವಿವರಗಳನ್ನು ಪಡೆದು ಫೆ.21ರಂದು ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.