ಫರಂಗಿಪೇಟೆಯಲ್ಲಿ ಪಿಎಫ್‌ಐ ಸಂಸ್ಥಾಪನ ದಿನ ಆಚರಣೆ
Update: 2017-02-17 16:18 IST
ಫರಂಗಿಪೇಟೆ, ಫೆ.17: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ 10ನೆ ವರ್ಷದ ಅಂಗವಾಗಿ ಸಂಸ್ಥಾಪನ ದಿನವನ್ನು ಇಂದು ಫರಂಗಿಪೇಟೆಯಲ್ಲಿ ಆಚರಿಸಲಾಯಿತು.
ಸಂದೇಶ ಮಾತುಗಳನ್ನಾಡಿದ ಪಿಎಫ್‌ಐ ಬಂಟ್ವಾಳ ತಾಲೂಕು ಸಮಿತಿಯ ಕಾರ್ಯದರ್ಶಿ ಸಲೀಮ್ ಕೆ., ಪಾಪ್ಯುಲರ್ ಫ್ರಂಟ್ ನಡೆದು ಬಂದ ಹಾದಿಯನ್ನು ವಿವರಿಸಿದರು.
ಪಿ.ಎಫ್.ಐ ಫರಂಗಿಪೇಟೆ ಸಮಿತಿಯ ಅಧ್ಯಕ್ಷ ನಝೀರ್ ಧ್ವಜಾರೋಹಣಗೈದರು.ಎಸ್.ಡಿ.ಪಿ.ಐ. ಪುದು ವಲಾಯಾಧ್ಯಕ್ಷ ಸುಲೈಮಾನ್ ಉಸ್ತಾದ್, ಗ್ರಾಮ ಸಮಿತಿಯ ಅಧ್ಯಕ್ಷ ಇಕ್ಬಾಲ್, ಕಾರ್ಯದರ್ಶಿ ಶಾಫಿ ಅಮ್ಮೆಮಾರ್ ಮತ್ತಿತರರು ಉಪಸ್ಥಿತರಿದ್ದರು ಶರೀಫ್ ಅಮ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.