ಸುಳ್ಯ: ಅಪಘಾತ ಬೈಕ್ ಸವಾರ ಮೃತ್ಯು
Update: 2017-02-17 16:20 IST
ಸುಳ್ಯ, ಫೆ.17: ಸುಳ್ಯದ ಓಡಬೈಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಸುಳ್ಯ ಕೆರೆಮೂಲೆಯ ಯುವಕ ಮೃತಪಟ್ಟ ದಾರುಣ ಘಟನೆ ಗುರುವರ ರಾತ್ರಿ ಸಂಭವಿಸಿದೆ.
ಸುಳ್ಯದ ಪೆಟ್ರೋಲ್‌ಬಂಕ್ ಉದ್ಯೋಗಿ ಕೆರೆಮೂಲೆಯ ಕಿಶೋರ್ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕಿಶೋರ್ ಗುರುವಾರ ರಾತ್ರಿ ತನ್ನ ಡ್ಯೂಕ್ ಬೈಕ್‌ನಲ್ಲಿ ಹೋಗುತ್ತಿರುವಾಗ ಬೈಕ್ ನಿಯಂತ್ರಣ ತಪ್ಪಿ ಒಂದು ರಿಕ್ಷಾಕ್ಕೆ ಮತ್ತು ಲಾರಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ.
ಪರಿಣಾಮವಾಗಿ ತಲೆಗೆ ತೀವ್ರ ಏಟಾದ ಕಿಶೋರ್ ಸ್ಥಳದಲ್ಲೆ ಮೃತಪಟ್ಟರೆಂದು ತಿಳಿದುಬಂದಿದೆ.