×
Ad

ಡಿಟಿಯು ವಿದ್ಯಾರ್ಥಿಗೆ ರೂ 1.25 ಕೋಟಿ ವೇತನದ ಉದ್ಯೋಗ ಆಫರ್ ಮಾಡಿದ ಉಬರ್

Update: 2017-02-17 16:42 IST

ಹೊಸದಿಲ್ಲಿ,ಫೆ.17 :ಡೆಲ್ಲಿ ಟೆಕ್ನಲಾಜಿಕಲ್ ಯುನಿವರ್ಸಿಟಿಯ (ಡಿಟಿಯು) ಅಂತಿಮ ವರ್ಷದ ಕಂಪ್ಯೂಟರ್ ವಿಜ್ಞಾನ ವಿದ್ಯಾರ್ಥಿಯಾಗಿರುವ ಸಿದ್ಧಾರ್ಥ್ ಸ್ಫೂರ್ತಿಯ ಚಿಲುಮೆ. 21 ವರ್ಷದ ಈ ಪ್ರತಿಭಾವಂತ ಯುವಕನಿಗೆ ಉಬರ್ ಟೆಕ್ನಾಲಜೀಸ್ ರೂ 1.25 ಕೋಟಿ ವೇತನದ ಉದ್ಯೋಗವೊಂದನ್ನು ಆಫರ್ ಮಾಡಿದೆ. ತನ್ನ ಭವಿಷ್ಯದ ಯೋಜನೆಗಳ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಹೇಳುವ ಸಿದ್ಧಾರ್ಥ್ ಗೆ ವಿಶ್ವ ಪರ್ಯಟನೆಗೈಯ್ಯುವಾಸೆ.

‘‘ವೀಸಾ ಸಮಸ್ಯೆಯೇನೂ ಇಲ್ಲದೇ ಇದ್ದಲ್ಲಿ ಅಕ್ಟೋಬರ್ ಒಳಗಾಗಿ ನಾನು ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳುತ್ತೇನೆ. ವಿಳಂಬವೇನಾದರೂ ಆದರೆ ಬೆಂಗಳೂರಿನ ಉಬರ್ ಕಚೇರಿಗೆ ಸೇರುತ್ತೇನೆ,’ಎಂದು ಹೇಳುತ್ತಾರೆ ಸಿದ್ಧಾರ್ಥ್. ತಮ್ಮ ಏಳು ತಿಂಗಳ ಇಂಟರ್ನ್‌ಶಿಪ್ ಅನ್ನು ಅವರು ಉಬರ್ ನಲ್ಲಿಯೇ ಮಾಡಿದ್ದರು. ಆದರೆ ಒಂದು ವೇಳೆ ಅವರಿಗೆ ಸ್ಯಾನ್ ಫ್ರಾನ್ಸಿಸ್ಕೋಗೆ ಹೋಗಲು ಸಾಧ್ಯವಾದಲ್ಲಿ ಅವರು ಮೊದಲು ಮಾಡುವ ಕೆಲಸಅಲ್ಲಿ ಜನಪ್ರಿಯ ಮೆಕ್ಸಿಕನ್ ತಿನಿಸು ಬುರ್ರಿಟೊ ತಿನ್ನುವುದಾಗಿದೆ ಎಂದು ಸಿದ್ಧಾರ್ಥ್ ಹೇಳುತ್ತಾರೆ. ಸಾಮಾಜಿಕ ಜಾಲತಾಣಗಳಿಂದ ದೂರವೇ ಇರುವ ಸಿದ್ಧಾರ್ಥ್ ತಮ್ಮ ಫೇಸ್ ಬುಕ್ ಖಾತೆಯನ್ನು ಕೆಲವು ಸಮಯದ ಹಿಂದೆಯೇ ಮುಚ್ಚಿದ್ದರು. ತಮ್ಮ ವಿರಾಮದ ಸಮಯ ಅವರು ವೀಡಿಯೊ ಗೇಮ್ಸ್ ಮತ್ತು ಫುಟ್ಬಾಲ್ ಆಡುತ್ತಾರೆ.

ದೊಡ್ಡ ಉದ್ಯೋಗ ಆಫರ್ ಪಡೆದ ಡಿಟಿಯುವಿನ ಎರಡನೇ ವಿದ್ಯಾರ್ಥಿಯಾಗಿದ್ದಾರೆ ಸಿದ್ಧಾರ್ಥ್. ಕಳೆದ ವರ್ಷ ಇದೇ ಸಂಸ್ಥೆಯ ವಿದ್ಯಾರ್ಥಿಯನ್ನು ಗೂಗಲ್ ಉದ್ಯೋಗ ರೂ 1.27 ಕೋಟಿ ವೇತನದ ಉದ್ಯೋಗ ಆಫರ್ ಮಾಡಿತ್ತು.

ಡಿಪಿಎಸ್ ವಸಂತ್ ಕುಂಜ್ ಇಲ್ಲಿನ ಹಳೆ ವಿದ್ಯಾರ್ಥಿಯಾಗಿರುವ ಸಿದ್ಧಾರ್ಥ್ ಗೆ ತಾನು ಸಾಫ್ಟ್ ವೇರ್ ಇಂಜಿನಿಯರ್ ಆಗಬೇಕೆಂಬ ಕನಸು ಬಹಳ ಕಾಲದಿಂದಲೂ ಇತ್ತು. 12ನೇ ತರಗತಿಯಲ್ಲಿ ಆತ ಶೇ. 95.4 ಅಂಕ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News