ಮಂಗಳೂರು: ಪಿಎಫ್‌ಐ "ಯುನಿಟಿ ಮಾರ್ಚ್" ಸಮಾವೇಶ ಆರಂಭ

Update: 2017-02-17 11:50 GMT

ಮಂಗಳೂರು, ಫೆ.17: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ದ 10ನೆ ವರ್ಷಾಚರಣೆಯ "ಪಾಪ್ಯುಲರ್ ಫ್ರಂಟ್ ಡೇ" ಕಾರ್ಯಕ್ರಮ ನಗರದ ನೆಹರೂ ಮೈದಾನದಲ್ಲಿ ಆರಂಭಗೊಂಡಿದೆ.

ಆಕರ್ಷಕ ಸಮವಸ್ತ್ರಧಾರಿಗಳ "ಯುನಿಟ್ ಮಾರ್ಚ್‌"ಗೆ ಪಿಎಫ್‌ಐ ರಾಷ್ಟ್ರೀಯ ಸಮಿತಿಯ ಸದಸ್ಯ ಕೆ.ಎಂ.ಶರೀಫ್ ಚಾಲನೆ ನೀಡಿದರು.

ಬಳಿಕ ಸಾರ್ವಜನಿಕ ಸಮಾವೇಶ ಆರಂಭಗೊಂಡಿದೆ. ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ, ಖ್ಯಾತ ಬರಹಗಾರ ಯೋಗೇಶ್ ಮಾಸ್ಟರ್, ಪಿಎಫ್‌ಐ ಮಂಗಳೂರು ಘಟಕದ ಅಧ್ಯಕ್ಷ ನವಾಝ್ ಉಳ್ಳಾಲ, ಬಂಟ್ವಾಳ ಘಟಕದ ಅಧ್ಯಕ್ಷ ಇಜಾಝ್ ಅಹ್ಮದ್, ಜಿಲ್ಲಾ ಸಮಿತಿಯ ಅಧ್ಯಕ್ಷ ಅಶ್ರಫ್ ಎ.ಕೆ. ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News