ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಮೂಡುಬಿದಿರೆ, ಫೆ.17: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಹಳೆ ವಿದ್ಯಾರ್ಥಿ ಸಂಘ ಹಾಗೂ ತುಳುಕೂಟ ಮೂಡಬಿದಿರೆ ಇವುಗಳ ಸಹಯೋಗದಲ್ಲಿ ಗುರುವಾರ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ 10ನೇ ವರ್ಷದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ತುಳುನಾಡಸಿರಿ ಮದಿಪು 2017ರಲ್ಲಿ ಮಂಗಳೂರಿನ ವಿಶ್ವವಿದ್ಯಾನಿಲ0ು ಕಾಲೇಜು ಪ್ರಥಮ ಸ್ಥಾನ ಹಾಗೂ ಉತ್ತಮ ಕಾರ್ಯಕ್ರಮ ನಿರೂಪಣೆ ಬಹುಮಾನ ಗಳಿಸುವುದರೊಂದಿಗೆ ಸಮಗ್ರ ಪ್ರಶಸ್ತಿ0ುನ್ನು ತನ್ನದಾಗಿಸಿಕೊಂಡಿದೆ.
ದ್ವಿತೀಯ ಬಹುಮಾನವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವು ಹಾಗೂ ತೃತೀಯ ಸ್ಥಾನವನ್ನು ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜು, ಕಟೀಲು ಪಡೆದುಕೊಂಡಿರುತ್ತವೆ. ಆಳ್ವಾಸ್ ಕಾಲೇಜು, ಮೂಡಬಿದಿರೆ ಮತ್ತು ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು ಸಮಾದಾನಕರ ಬಹುಮಾನವನ್ನು ಪಡೆದುಕೊಂಡಿರುತ್ತವೆ.
ವೈಯಕ್ತಿಕ ವಿಭಾಗದ ವರ್ಣಚಿತ್ರ ರಚನೆಯಲ್ಲಿ ಪ್ರಜ್ಞೇಶ್, ಸರಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವು (ಪ್ರಥಮ) ನಿಶಾ, ಆಳ್ವಾಸ್ ಕಾಲೇಜು, ಮೂಡಬಿದಿರೆ (ದ್ವಿತೀಯ); ಲಿಖಿತ ರಸಪ್ರಶ್ನೆಯಲ್ಲಿ ರೋಹಿತಾಶ್ವ, ಶ್ರೀ ನಿರಂಜನ ಸ್ವಾಮಿ ಕಾಲೇಜು, ಸುಂಕದಕಟ್ಟೆ (ಪ್ರಥಮ) ಹರ್ಷ ಕೃಷ್ಣ ಭಟ್, ಧವಳಾ ಕಾಲೇಜು ಮೂಡಬಿದ್ರೆ (ದ್ವಿತೀಯ); ತುಳು ಚಲನಚಿತ್ರ ಗಾಯನ ಸ್ಪರ್ಧೆಯಲ್ಲಿ ನಿನಾದ, ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ (ಪ್ರಥಮ) ವಿನುತಾ ಆಳ್ವ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ದಕಟ್ಟೆ (ದ್ವಿತೀಯ); ರಂಗೋಲಿ ಸ್ಪರ್ಧೆಯಲ್ಲಿ ಅಂಜುಶ್ರೀ, ಎಸ್.ಡಿ.ಎಮ್. ಕಾಲೇಜು, ಉಜಿರೆ (ಪ್ರಥಮ) ರಕ್ಷಾ ಜಿ. ಮಲ್ಯ ಆಳ್ವಾಸ್ ಕಾಲೇಜು, ಮೂಡಬಿದಿರೆ (ದ್ವಿತೀಯ); ತುಳು ಆಶುಭಾಷಣ ಸ್ಪರ್ಧೆಯಲ್ಲಿ ಪ್ರಸನ್ನ ಕರ್ಮಾಕರ್, ಸೈಂಟ್ ಆಂಟೊನಿ ಕಾಲೇಜು, ನಾರಾವಿ (ಪ್ರಥಮ) ವಿಜೇತಾ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿ (ದ್ವಿತೀಯ) ಬಹುಮಾನವನ್ನು ಪಡೆದಿರುತ್ತಾರೆ.
ಗುರುವಾರ ಸಂಜೆ ಶ್ರೀ ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರ್ರೊ. ಚಂದ್ರಶೇಖರ ದೀಕ್ಷಿತ್‌ರವರ ಅಧ್ಯಕ್ಷತೆ0ುಲ್ಲಿ ನಡೆದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಅಬ್ದುಲ್ ರಹಿಮಾನ್, ಚಂದ್ರಹಾಸ ಸಾಧು ಸನಿಲ್ ಮತ್ತು ಅಶ್ವಿನ್ ಜೆ. ಪಿರೇರಾ ಭಾಗವಹಿಸಿ ಎಲ್ಲಾ ಸ್ಪರ್ಧಾ ಕಾಲೇಜುಗಳಿಗೆ ಸ್ಮರಣಿಕೆ ಹಾಗೂ ವಿಜೇತರಿಗೆ ಬಹುಮಾನ ವಿತರಿಸಿದರು.
ವೇದಿಕೆಯಲ್ಲಿ ತೀರ್ಪುಗಾರರಾದ ಡಾ. ಕಮಲಾಕ್ಷ, ಪ್ರೊ. ಪಿ.ಎನ್.ಮೂಡಿತ್ತಾ0ು ಮತ್ತು ಪ್ರೊ. ಮಧೂರು ಮೋಹನ ಕಲ್ಲೂರಾ0ು, ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ರಮೇಶ್ ಭಟ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹರೀಶ್, ಕಾರ್ಯಕ್ರಮ ಸಂಯೋಜಕರಾದ ರಾಧಾಕೃಷ್ಣ ಶೆಟ್ಟಿ ಮತ್ತು ನಳಿನಿ, ವಿದ್ಯಾರ್ಥಿ ಸಂಯೋಜಕರಾದ ಅಲಿಸ್ಟರ್, ಸುಧಾಕರ್, ಗ್ಲಾಡ್‌ಸನ್ ಕಾರ್ಡೋಜಾ, ನಾಗೇಶ್ ಪ್ರಭು, ಜಿತೇಂದ್ರ, ಜೆಸ್ವಿನ್ ಡಿಸೋಜಾ, ವೆನೆಸ್ಸಾ ಮೊರಾಸ್, ರಮ್ಯಾರಾವ್ ಉಪಸ್ಥಿತರಿದ್ದರು.
ಹರೀಶ್ ಸ್ವಾಗತಿಸಿದರು. ರಾಧಾಕೃಷ್ಣ ಶೆಟ್ಟಿ ವಂದಿಸಿದರು. ವೆನೆಸ್ಸಾ ಮೊರಾಸ್ ವಿಜೇತರ ವಿವರ ನೀಡಿದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.