ಮೂಡುಬಿದಿರೆ: ಶ್ರೀ ರವಿಚಂದ್ರ ಕನ್ನಡಿಕಟ್ಟೆ ಅಭಿಮಾನ ಬಳಗದಿಂದ ರಕ್ತದಾನ ಶಿಬಿರ

Update: 2017-02-17 12:18 GMT

ಮೂಡುಬಿದಿರೆ, ಫೆ.17: ಶ್ರೀ ರವಿಚಂದ್ರ ಕನ್ನಡಿಕಟ್ಟೆ ಅಭಿಮಾನಿ ಬಳಗ, ಜೇಸಿಐ ಮೂಡುಬಿದಿರೆ ತ್ರಿಭುವನ್, ಎನ್.ಎಸ್.ಎಸ್.ಘಟಕ ಆಳ್ವಾಸ್ ಕಾಲೇಜು ಆಫ್ ನರ್ಸಿಂಗ್ ಹಾಗೂ ರಕ್ತನಿಧಿ ಕೇಂದ್ರ ಯೆನಪೋಯ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಮಂಗಳೂರು ಇವುಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರವು ಶುಕ್ರವಾರದಂದು ಸಮಾಜ ಮಂದಿರದಲ್ಲಿ ನಡೆಯಿತು.

ಮೂಡುಬಿದಿರೆ ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ಎಸ್.ಸುವರ್ಣ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯೆನಪೋಯ ಕಾಲೇಜಿನ ಪ್ರಾಂಶುಪಾಲ ಡಾ.ಶಶಿಧರ ಕಾರ್ಯಕ್ರಮವನ್ನು ಉದ್ಘಾಟಿಸಿ ರಕ್ತದಾನ ಶಿಬಿರ ಮಹತ್ವದ ಕಾರ್ಯಕ್ರಮ, ರಕ್ತದಾನ ಮಾಡುವ ಎಲ್ಲಾ ದಾನಿಗಳಿಗೂ ಒಳ್ಳೆಯದಾಗಲಿ ಎಂದರು.

ಮುಖ್ಯ ಅತಿಥಿಯಾಗಿ ಆಳ್ವಾಸ್ ಕಾಲೇಜು ಆಫ್ ನರ್ಸಿಂಗ್ ಕಾಲೇಜಿನ ಪ್ರಾಶುಂಪಾಲ ಡಾ.ಬಿ.ಎ.ಯತಿಕುಮಾರ ಸ್ವಾಮಿ ಗೌಡ ಮಾತಾನಾಡಿ, ರಕ್ತದಾನಿಗಳು ಜೀವ ರಕ್ಷಕರು. ರಕ್ತದಾನವೊಂದು ಶ್ರೇಷ್ಠ ಸಮಾಜ ಸೇವೆ. ರಕ್ತದಾನ ಮಾಡುವುದರಿಂದ ಆರೋಗ್ಯವು ಸುಸ್ಥಿತಿಯಲ್ಲಿರುತ್ತದೆ ಹಾಗೂ ಜೀವಕೋಶಗಳು ಹೆಚ್ಚಾಗುತ್ತದೆ ಎಂದರು.

ವೇದಿಕೆಯಲ್ಲಿ ರಕ್ತದಾನ ವಿಭಾಗದ ಜೇಸಿ ವಲಯ 15ರ ಸಂಯೋಜಕ ಪ್ರಶಾಂತ್ ಜತ್ತನ್ನ, ಮೂಡ ಅಧ್ಯಕ್ಷ ಸುರೇಶ್ ಪ್ರಭು, ಶ್ರೀ ರವಿಚಂದ್ರ ಕನ್ನಡಿಕಟ್ಟೆ ಅಭಿಮಾನ ಬಳಗದ ಅಧ್ಯಕ್ಷ ನಾರಾಯಣ ಪಿ.ಎಂ., ಜೇಸಿಐ ಅಧ್ಯಕ್ಷ ಸಂತೋಷ್ ಕುಮಾರ್ ಹಾಜರಿದ್ದರು.

ಪುರಸಭೆ ಸುರೇಶ್ ಕೋಟ್ಯಾನ್ ಸ್ವಾಗತಿಸಿದರು. ಶಂಕರ್ ಕೋಟ್ಯಾನ್ ನಿರೂಪಿಸಿ ವಂದಿಸಿದರು. ಈ ಶಿಬಿರದಲ್ಲಿ 60 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News