×
Ad

ಮೂಡುಬಿದಿರೆ: ನ್ಯಾಶನಲ್ ಕಲ್ಚರಲ್ ಫೆಸ್ಟಿವಲ್ ಗೆ ಅಯನಾ ಆಯ್ಕೆ

Update: 2017-02-17 19:05 IST

ಮೂಡುಬಿದಿರೆ, ಫೆ.17: ಕೇಂದ್ರ ಸರಕಾರದ ಸಿಸಿಆರ್‌ಟಿ ವತಿಯಿಂದ ಹೈದರಾಬಾದ್‌ನಲ್ಲಿ 1 ವಾರದವರೆಗೆ ನಡೆಯಲಿರುವ ನ್ಯಾಶನಲ್ ಕಲ್ಚರಲ್ ಫೆಸ್ಟಿವಲ್‌ನಲ್ಲಿ ಭಾಗವಹಿಸಲು ಅಯನಾ ವಿ. ರಮಣ್ ಆಯ್ಕೆಯಾಗಿದ್ದಾರೆ.

ಮಾರ್ಚ್ 4 ರಿಂದ 10 ರವರೆಗೆ ಹೈದರಾಬಾದಿನ ಹೈಟೆಕ್ ಸಿಟಿಯ ಬಳಿ ಉತ್ಸವ ನಡೆಯಲಿದ್ದು; ಅಯನಾ ವಿ. ರಮಣ್ ಸೋಲೋ ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ.

ವಿದುಷಿ ಶಾರದಾ ಮಣಿಶೇಖರ್ - ಬೆಂಗಳೂರಿನ ವಿದ್ವಾನ್ ಸತ್ಯನಾರಾಯಣ ರಾಜು ಶಿಷ್ಯೆಯಾಗಿರುವ ಅಯನಾ, ಆಳ್ವಾಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ.

ಪತ್ರಕರ್ತ ಕೆ.ವಿ.ರಮಣ್ - ಉಪನ್ಯಾಸಕಿ ಮುಕಾಂಬಿಕಾ ಜಿ.ಎಸ್. ದಂಪತಿಯ ಪುತ್ರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News