×
Ad

ಫೆ.18ರಂದು ನೌಶಾದ್ ಬಾಖವಿ ಮಂಗಳೂರಿಗೆ

Update: 2017-02-17 19:46 IST

ಮಂಗಳೂರು, ಫೆ. 17: ನಗರದ ನೆಹರೂ ಮೈದಾನದಲ್ಲಿ ಫೆ.18ರಂದು ಸಂಜೆ 6 ಗಂಟೆಗೆ ಸುನ್ನೀ ಸಂದೇಶ ಮಾಸ ಪತ್ರಿಕೆಯ 15ನೆ ವಾರ್ಷಿಕ ಮಹಾ ಸಂಭ್ರಮ ಪ್ರಯುಕ್ತ ನಡೆಯುವ ಮಾದಕ ದ್ರವ್ಯದ ವಿರುದ್ಧ ಸಮಾರಂಭದಲ್ಲಿ ಖ್ಯಾತ ವಾಗ್ಮಿ ಎ. ಎಂ. ನೌಶಾದ್ ಬಾಖವಿ ಭಾಗವಹಿಸಲಿದ್ದಾರೆ.

ಸಮಾರಂಭವನ್ನು ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಉದ್ಘಾಟಿಸಲಿದ್ದಾರೆ. ಸಮಸ್ತ ಕೇಂದ್ರೀಯ ಉಪಾಧ್ಯಕ್ಷ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ದುಆ ನೆರವೇರಿಸಲಿದ್ದಾರೆ. ಸ್ವಾಗತ ಸಮಿತಿಯ ಅಧ್ಯಕ್ಷ ಎ. ಎಚ್. ನೌಷಾದ್ ಸೂರಲ್ಪಾಡಿ ಅಧ್ಯಕ್ಷತೆ ವಹಿಸಲಿದ್ದಾರೆ.

ಅಲ್ ಮುಝೈನ್ ಗ್ರೂಪ್‌ನ ಅಧ್ಯಕ್ಷ ಹಾಗೂ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಹಾಜಿ ಝಕರಿಯಾ ಜೋಕಟ್ಟೆ, ಸುನ್ನೀ ಸಂದೇಶ ಪ್ರಧಾನ ಸಂಪಾದಕ ಕೆ. ಎಸ್. ಹೈದರ್ ದಾರಿಮಿ, ಸಮಸ್ತ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಶೈಖುನಾ ಖಾಸಿಂ ಉಸ್ತಾದ್, ಝೈನುಲ್ ಆಬಿದೀನ್ ತಂಙಳ್, ಸಮಸ್ತ ಉಲಮಾ ಉಮರ ನೇತಾರರು ಭಾಗವಹಿಸಲಿದ್ದಾರೆ ಎಂದು ಮುಸ್ತಫ ಫೈಝಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಶಸ್ವಿಗೆ ಕರೆ: 
 ಪ್ರಸ್ತುತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಎಸ್ಕೆಎಸೆಸೆಫ್ ಮಂಗಳೂರು ತಾಲೂಕು ಸಮಿತಿ, ಎಸ್ಕೆಎಸೆಸೆಫ್ ಕ್ಲಸ್ಟರ್ ಸಮಿತಿ, ಕಣ್ಣೂರು ಕ್ಲಸ್ಟರ್ ಸಮಿತಿ, ದೇರಳಕಟ್ಟೆ, ಮಂಗಳನಗರ ಕ್ಲಸ್ಟರ್ ಸಮಿತಿ, ಮುಡಿಪು ಕ್ಲಸ್ಟರ್ ಸಮಿತಿ, ಮಂಗಳೂರು ರೇಂಜ್ ಜಮೀಯ್ಯತುಲ್ ಮುಅಲ್ಲಿಮೀನ್, ಎಸ್ಕೆಎಸೆಸೆಫ್ ಹಾಗೂ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಿನ್ಯ, ಎಸ್ಕೆಎಸೆಸೆಫ್ ಬೆಂಗರೆ ಶಾಖೆ, ಎಸ್ಕೆಎಸೆಸೆಫ್ ಉಚ್ಚಿಲ ಶಾಖೆ, ಎಂ. ಆರ್. ಬುಕ್‌ಸ್ಟಾಲ್ ಮಂಗಳೂರು ಹಾಗೂ ನೌಶಾದ್ ಬಾಖವಿ ಅಭಿಮಾನಿ ಬಳಗ ಮತ್ತು ಸಮಸ್ತ ಕಾರ್ಯಕರ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News