×
Ad

ಕರ್ಣಾಟಕ ಬ್ಯಾಂಕ್‌ನಿಂದ ವಿದ್ಯಾರ್ಥಿಗಳಿಗೆ "ಮನೆ ಬೆಳಕು" ಯೋಜನೆ

Update: 2017-02-17 19:48 IST


ಮಣಿಪಾಲ, ಫೆ.17: ಕರ್ಣಾಟಕ ಬ್ಯಾಂಕಿನ ಸಹಕಾರದೊಂದಿಗೆ ಶಿವಳ್ಳಿಯ ಭಾರತೀಯ ವಿಕಾಸ ಟ್ರಸ್ಚ್ (ಬಿವಿಟಿ) ಕಳೆದ ವರ್ಷ ಪ್ರಾರಂಭಿಸಿದ್ದ ಕಡಿಮೆ ಆದಾಯದ ವಿದ್ಯಾರ್ಥಿಗಳ ಮನೆಗಳಿಗೆ ಸೌರ ವಿದ್ಯುದ್ಧೀಪಗಳ ಅಳವಡಿಕೆಯ ಱಮನೆ ಬೆಳಕುೞ ಯೋಜನೆಯನ್ನು ಈ ವರ್ಷವೂ ಮುಂದುವರಿಸಲಿದೆ.

ಈ ಯೋಜನೆ ಮೂಲಕ ಉಡುಪಿ, ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳ ವಿವಿಧ ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯುತ್ ಸಂಪರ್ಕವೇ ಇಲ್ಲದ ಸುಮಾರು 100 ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರ ಮನೆಗಳಿಗೆ ಎರಡು ದೀಪಗಳ ಸೋಲಾರ್ ಸಿಸ್ಟಂಗಳನ್ನು ಅಳವಡಿಸಡಿಸುವುದು ಮನೆ ಬೆಳಕು ಯೋಜನೆಯಾಗಿದೆ.

ಈ ದೀಪಗಳಿಂದ ವಿದ್ಯಾರ್ಥಿಗಳ ಓದಿಗೆ ಬಹಳಷ್ಟು ಸಹಕಾರಿಯಾಗಿದ್ದು, ಯೋಜನೆಗಾಗಿ ಕರ್ಣಾಟಕ ಬ್ಯಾಂಕು 5 ಲಕ್ಷ ರೂ.ಗಳನ್ನು ನೀಡಿದೆ. ಕಳೆದ ವರ್ಷದ ಯೋಜನೆಯ ಯಶಸ್ಸಿನಿಂದ ಇದರ ಉಪಯುಕ್ತತೆಯನ್ನು ಮನಗಂಡ ಕರ್ಣಾಟಕ ಬ್ಯಾಂಕು 2017-18ನೇ ಸಾಲಿಗೆ ಮತ್ತೆ 100 ಮನೆಗಳಿಗೆ ಬೆಳಕನ್ನು ನೀಡಲು ಮುಂದೆ ಬಂದಿದೆ ಎಂದು ಬಿವಿಟಿಯ ಆಡಳಿತ ಟ್ರಸ್ಟ್ ಕೆ.ಎಂ. ಉಡುಪ ಹೇಳಿದ್ದಾರೆ.

ಈ ವರ್ಷ ಉಡುಪಿ, ದ.ಕ. ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕೆ.ಎಂ.ಉಡುಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News