ಫೆ.19ಕ್ಕೆ ನಿಟ್ಟೆ -ಮಂಗಳೂರು ಮ್ಯಾರಾಥಾನ್ 2017
ಮಂಗಳೂರು,ಫೆ.17:ಫೆಬ್ರವರಿ 19ರಂದು ನಿಟ್ಟೆ- ಮಂಗಳೂರು ಮ್ಯಾರಾಥಾನ್ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಕಳೆದ ನಾಲ್ಕು ವರ್ಷಗಳಿಂದ ಈ ರೀತಿಯ ಓಟವನ್ನು ಶೈಕ್ಷಣಿಕ ವರ್ಷದ ಕೊನೆಯಲ್ಲಿ ಕ್ರೀಡಾಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿಸಲು ಹಮ್ಮಿಕೊಳ್ಳಲಾಗುತ್ತಿದೆ.
ಈ ಬಾರಿ ಸುಮಾರು 14000ಪ್ರತಿನಿಧಿಗಳ ಈ ಓಟದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.ಈ ಓಟದಲ್ಲಿ ಹಾಫ್ ಮ್ಯಾರಾಥಾನ್ 10ಕಿ.ಮೀ,5.ಕಿ.ಮೀ,2.ಕಿ.ಮೀ ವೃತ್ತಿಪರ ಓಟಗಾರರು,ಕಾಲೇಜು ವಿದ್ಯಾರ್ಥಿಗಳು ಹಾಗೂ ಯಾವ ವಯೋಮಾನದವರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಫೆ.19ರಂದು ಬೆಳಗ್ಗೆ 6 ಗಂಟೆಗೆ ಮಂಗಳಾ ಕ್ರೀಡಾಂಗಣದಿಂದ ಓಟ ಆಂಭವಾಗಲಿದೆ.ಮಣ್ಣ ಗುಡ್ಡ,ನ್ಯೂಚಿತ್ರ,ಬಂದರ್ ರಸ್ತೆ ,ರಾವ್ ಆ್ಯಂಡ್ ರಾವ್ ವೃತ್ತ,ಪಿವಿಎಸ್ ವೃತ್ತ,ಲಾಲ್‌ಭಾಗ್ ಬಳಿಕ ಮಂಗಳಾ ಕ್ರೀಡಾಂಗಣ ತಲುಪುವ ಹಾಫ್ ಮ್ಯಾರಾಥಾನ್ ಮತ್ತು 10 ಕಿ.ಮೀ ಓಟ ಯೂಟರ್ನ್ ಕುಂಠಿಕಾನ ರಸ್ತೆ ಮೂಲಕ ಮಂಗಳಾ ಕ್ರೀಡಾಂಗಣ ತಲುಪವುದಾಗಿದೆ.
ರೈಲ್ವೇ ಉದ್ಯೂಗಿ ಮತ್ತು ರಾಷ್ಟ್ರೀಯ ಕ್ರೀಡಾಪಟು ಶ್ರೀಧರ ಆಳ್ವಾ,ಸಾರ್ಕ್ ಕ್ರೀಡಾ ಕೂಟದಲ್ಲಿ ರಿಲೇ ಒಟದಲ್ಲಿ ಚಿನ್ನದ ಪದಕ ವಿಜೇತ ಅನಿಲ್ ಶೆಟ್ಟಿ ಮ್ಯಾರಾಥಾನ್ ರಾಯಭಾರಿಗಳಾಗಿ ಭಾಗವಹಿಸಲಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಸಹಯೋಗದೊಂದಿಗೆ ಈ ಸ್ಫರ್ಧೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.