ರಾಷ್ಟ್ರಮಟ್ಟದ ಕರಾಟೆ: ಅಚಲ್‌ಗೆ ಕಂಚು
Update: 2017-02-17 20:00 IST
ಮಂಗಳೂರು, ಫೆ.17: ಇತ್ತೀಚೆಗೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಜರಗಿದ ರಾಷ್ಟ್ರಮಟ್ಟದ ಬುಡೋಕಾನ್ ಮುಕ್ತ ಕರಾಟೆ ಚಾಂಪಿಯನ್‌ಶಿಪ್ ಸುರಕ್ಷಾ ಕಪ್ 2017ರಲ್ಲಿ ಪುರುಷರ ಕಮಿಟೆ ಓರೆಂಜ್ ಹಾಗೂ ಗ್ರೀನ್ ಬೆಲ್ಟ್ 40,45 ಕೆಜಿ ವಿಭಾಗದಲ್ಲಿ ಶಾರದಾ ವಿದ್ಯಾಸಂಸ್ಥೆಯ ಆರನೆ ತರಗತಿ ವಿದ್ಯಾರ್ಥಿ ಆರ್. ಅಚಲ್ ಕಂಚಿನ ಪದಕ ಪಡೆದಿದ್ದಾರೆ.
ಇವರು ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಹಾಗೂ ಇನ್‌ಸ್ಟಿಟ್ಯೂಟ್ ಆ್ ಕರಾಟೆ ಆ್ಯಂಡ್ ಎಲೈಡ್ ಆರ್ಟ್ಸ್ ಸಹಯೋಗದಲ್ಲಿ ಇತ್ತೀಚೆಗೆ ನಗರದ ಯು ಶ್ರೀನಿವಾಸ ಮಲ್ಯ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ರಾಜ್ಯಮಟ್ಟದ ಅಂತರ್ ಶಾಲಾ, ಕಾಲೇಜು ಕರಾಟೆ ಚಾಂಪಿಯನ್‌ಶಿಪ್ 2017 ಗ್ರೀನ್ ಬೆಲ್ಟ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು.