ಮರ್ಧಾಳ: ಗುಡ್ಡಕ್ಕೆ ಬೆಂಕಿ
Update: 2017-02-17 20:37 IST
ಕಡಬ, ಫೆ.17. ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ಬಿದ್ದ ಬೆಂಕಿ ಕಿಡಿಯಿಂದಾಗಿ ಸುಮಾರು 4 ಎಕರೆ ಸರಕಾರಿ ಗುಡ್ಡವು ಹೊತ್ತಿ ಉರಿದ ಘಟನೆ ಶುಕ್ರವಾರದಂದು ಮರ್ಧಾಳ ಸಮೀಪದ ಶಿವಾಜಿನಗರ ಎಂಬಲ್ಲಿ ನಡೆದಿದೆ.
ಚರ್ಮದಗುಂಡಿ ಸರಕಾರಿ ಗುಡ್ಡದ ಬದಿಯಲ್ಲಿನ ಟ್ರಾನ್ಸ್‌ಫಾರ್ಮರ್‌ನಿಂದ ಬಿದ್ದ ಕಿಡಿಯಿಂದಾಗಿ ಹೊತ್ತಿ ಉರಿದ ಬೆಂಕಿಯನ್ನು ನಂದಿಸಲು ಸ್ಥಳೀಯರು ಉರಿಬಿಸಿಲಿನ ಬೇಗೆಯಿಂದಾಗಿ ಹರಸಾಹಸಪಟ್ಟರು.
ಪುತ್ತೂರು , ಬೆಳ್ತಂಗಡಿ, ಮಂಗಳೂರು ಅಗ್ನಿಶಾಮಕ ದಳದವರಿಗೆ ಕರೆಮಾಡಿದರೆ ವಾಹನ ಲಭ್ಯವಿಲ್ಲವೆನ್ನುವ ಮೂಲಕ ಕೈಚೆಲ್ಲಿದರು.ಕೊನೆಗೂ ಊರವರೆಲ್ಲರ ಪ್ರಯತ್ನದಿಂದಾಗಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.
ಐತ್ತೂರು ಗ್ರಾ.ಪಂ. ಅಧ್ಯಕ್ಷ ಸತೀಶ್ ಪೂಜಾರಿ, ಐತ್ತೂರು ಹಾಗೂ ಮರ್ಧಾಳ ಗ್ರಾ.ಪಂ. ಸಿಬ್ಬಂದಿಗಳು, ಸ್ಥಳೀಯ ಕಾರ್ಮಿಕರು ಸೇರಿದಂತೆ ಊರವರು ಬೆಂಕಿ ನಂದಿಸುವಲ್ಲಿ ಸಹಕರಿಸಿದರು.