ಕೊಂಬಾರು: ಶಾರ್ಟ್ ಸರ್ಕ್ಯೂಟ್‌ನಿಂದ ಕೃಷಿ ನಾಶ, ಲಕ್ಷಾಂತರ ರೂ. ನಷ್ಟ
Update: 2017-02-17 20:41 IST
ಕಡಬ, ಫೆ.17. ಕೊಂಬಾರು ಗ್ರಾಮದ ಹೊಳ್ಳಾರು ಚಿಂಪ್ಲಗುರಿ ಎಂಬಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹೇಮಾವತಿ ಎಂಬವರ ಜಾಗದಲ್ಲಿ ಅಪಾರ ಕೃಷಿ ಸುಟ್ಟು ಹೋಗಿದ್ದು ಸುಮಾರು 2.5 ಲಕ್ಷಕ್ಕೂ ಮಿಕ್ಕಿ ನಷ್ಟ ಉಂಟಾಗಿದೆ ಎಂದು ಕಡಬ ಕಂದಾಯ ಇಲಾಖೆಗೆ, ಮೆಸ್ಕಾಂ ಇಲಾಖೆಗೆ ಮತ್ತು ಕೃಷಿ ಇಲಾಖೆಗೆ ದೂರು ನೀಡಲಾಗಿದೆ.
ಫೆ.16 ರಂದು ಮಧ್ಯಾಹ್ನ ಏಕಾಏಕಿ ಸುಂಕದಕಟ್ಟೆಯಿಂದ ಕೆಂಜಳಕ್ಕೆ ಸಂಪರ್ಕ ಕಲ್ಪಿಸುವ ಎಚ್.ಟಿ ಲೈನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ವಿದ್ಯುತ್ ತಂತಿಯಲ್ಲಿ ಬೆಂಕಿ ಹತ್ತಿಕೊಂಡು ಬೆಂಕಿಯ ಜ್ವಾಲೆಗಳು ಕೃಷಿ ಭೂಮಿಗೆ ಬಿದ್ದು ಅಡಿಕೆ ತೆಂಗು ಹಾಗೂ ರಬ್ಬರ್ ಕೃಷಿ ಸುಟ್ಟು ಹೋಗಿದ್ದು ಇದರಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.