ಮಂಗಳೂರು: ಪೊಯ್ಯತ್ತಬೈಲ್ ದರ್ಗಾ ಉರೂಸ್‌ಗೆ ಚಾಲನೆ
Update: 2017-02-17 21:05 IST
ಮಂಗಳೂರು, ಫೆ. 17: ಉಳ್ಳಾಲ ಪೊಯ್ಯತ್ತಬೈಲ್‌ನಲ್ಲಿರುವ ಮಣವಾಠಿಬೀವಿ ದರ್ಗಾದ ಉರೂಸ್ ಕಾರ್ಯಕ್ರಮವನ್ನು ಮಂಜೇಶ್ವರ ಸಂಯುಕ್ತ ಜಮಾಅತ್ ಅಧ್ಯಕ್ಷ ಅಸ್ಸಯ್ಯದ್ ಅತಾವುಲ್ಲ ತಂಙಳ್ ಶುಕ್ರವಾರ ಧ್ವಜಾರೋಹಣ ನಡೆಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಸಮಿತಿ ಅಧ್ಯಕ್ಷ ವಿ.ಅಹ್ಮದ್ ಕುಂಞಿ ಓಡಂಗಳ, ಜಮಾಅತ್‌ನ ಮಾಜಿ ಅಧ್ಯಕ್ಷ ನಡಿಬೈಲ್ ಅಹ್ಮದ್ ಕುಂಞಿ, ಪಿ.ಕೆ.ಕುಂಞಿ ಅಹ್ಮದ್ ಮುಸ್ಲಿಯಾರ್, ಟಿ. ಅಹ್ಮದ್, ಟಿ. ಇಸ್ಮಾಯೀಲ್ ಮಾಸ್ಟರ್, ಎಸ್.ಎಂ.ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು. ಜಮಾಅತ್ ಸಮಿತಿ ಕಾರ್ಯದರ್ಶಿ ಪಿ.ಕೆ. ಇಬ್ರಾಹೀಂ ಸ್ವಾಗತಿಸಿದರು.