×
Ad

ಬಾಲಕಿಯ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲು ಮನವಿ

Update: 2017-02-17 21:16 IST

ಉಡುಪಿ, ಫೆ.17: ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಡ ಕುಟುಂಬದ ಬಾಲಕಿಯೊಬ್ಬಳ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಪೋಷಕರು ದಾನಿಗಳಲ್ಲಿ ಮನವಿ ಮಾಡಿದ್ದಾರೆ.

ಶಿವಮೊಗ್ಗ ತಾಲೂಕಿನ ಆರ್‌ಎಂಎಲ್ ನಗರದ ಶಾಹಿನಾ ಎಂಬವರ ಮಗಳು ಮೆಹೆಕ್ ಜಿ.(11) ಇದೀಗ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗದ ಆರ್.ಆರ್.ಆಂಗ್ಲ ಮಾಧ್ಯಮ ಶಾಲೆಯ ಆರನೆ ತರಗತಿಯ ವಿದ್ಯಾರ್ಥಿನಿ ಯಾಗಿರುವ ಮೆಹೆಕ್‌ಗೆ ಮೂರು ತಿಂಗಳ ಹಿಂದೆ ಜ್ವರ ಹಾಗೂ ಕೈಕಾಲು ನೋವು ಕಾಣಿಸಿಕೊಂಡಿತು.

ಮೆಹೆಕ್‌ಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅದು ರಕ್ತದ ಕ್ಯಾನ್ಸರ್ ಎಂಬುದಾಗಿ ತಿಳಿಯಿತು. ಈಕೆಯ ಚಿಕಿತ್ಸೆಗೆ 8ಲಕ್ಷ ರೂ. ಹಣ ಬೇಕಾಗುತ್ತದೆ ಎಂದು ಆಕೆಯ ವೈದ್ಯ ಡಾ.ಶ್ರೀಕಿರಣ್ ಎ.ಹೆಬ್ಬಾರ್ ತಿಳಿಸಿದ್ದಾರೆ.

ಮೆಹೆಕ್ ತಂದೆ ಮುಹಮ್ಮದ್ ರಫೀ ಆರು ವರ್ಷಗಳ ಹಿಂದೆ ತೀರಿಕೊಂಡಿ ದ್ದರು. ಇವರ ಮೂವರು ಮಕ್ಕಳಲ್ಲಿ ಎರಡು ಹೆಣ್ಣು ಮತ್ತು ಒಂದು ಗಂಡು. ಗಂಡ ತೀರಿಕೊಂಡ ಬಳಿಕ ಮೊಟ್ಟೆ ವ್ಯಾಪಾರ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿರುವ ಶಾಹಿನಾ ತನ್ನ ಮೂರು ಮಕ್ಕಳನ್ನು ಸಾಕುವ ಜವಾ ಬ್ದಾರಿಯನ್ನು ಹೊಂದಿದ್ದಾರೆ.

ಈ ಮಧ್ಯೆ ಮಗಳಿಗೆ ಈ ಕಾಯಿಲೆ ಬಂದಿರುವುದರಿಂದ ಈ ಬಡ ಕುಟುಂಬ ದಿಕ್ಕು ತೋಚದಂತಾಗಿದೆ. ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶಾಹಿನಾ ತನ್ನ ಮಗಳ ಚಿಕಿತ್ಸೆಗಾಗಿ ಊರು ಊರು ಅಲೆದು ಕಾಡಿ ಬೇಡಿ ಹಣ ಸಂಗ್ರಹಿಸುತ್ತಿದ್ದಾರೆ.

ಆದುದರಿಂದ ಈ ಬಾಲಕಿಯ ಚಿಕಿತ್ಸೆಗೆ ನೆರವು ನೀಡುವಂತೆ ಶಾಹಿನಾ ದಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನೆರವು ನೀಡುವ ದಾನಿಗಳು ಈ ಕೆಳಗಿನ ಅಕೌಂಟ್ ನಂಬರ್‌ಗೆ ಹಣ ಕಳುಹಿಸುವಂತೆ ವಿನಂತಿಸಲಾಗಿದೆ. ಮೆಹೆಕ್ ಆಸ್ಪತ್ರೆ ನಂಬ್ರ- 2973932, ಕಸ್ತೂರ್ಬಾ ಹಾಸ್ಪಿಟಲ್, ಐಸಿಐಸಿಐ ಬ್ಯಾಂಕ್, ಮಣಿಪಾಲ, ಅಕೌಂಟ್ ನಂಬರ್- 007201018431, ಐಎಫ್‌ಎಸ್‌ಸಿ ಕೋಡ್- ಐಸಿಐಸಿ 0000072. ಮೊಬೈಲ್- 9632105336. ವಿಳಾಸ- ಶಾಹಿನಾ, ಏಗ್ ಮರ್ಚೆಂಟ್, ಆರ್‌ಎಂಎಲ್ ನಗರ, ಶಿವಮೊಗ್ಗ ತಾಲೂಕು ಮತ್ತು ಜಿಲ್ಲೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News