ಮಂಗಳೂರು: ವಿವಿಧೆಡೆ ಪಾಪ್ಯುಲರ್ ಫ್ರೆಂಟ್ ಡೇ ಕಾರ್ಯಕ್ರಮ ಆಚರಣೆ
ಮಂಗಳೂರು, ಫೆ.17: ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ ಬಜ್ಪೆ ಡಿವಿಷನ್ ವತಿಯಿಂದ ಡಿವಿಷನ್ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಪಾಪ್ಯುಲರ್ ಫ್ರೆಂಟ್ ಡೇ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಬಜ್ಪೆ:
ಬಜ್ಪೆಯಲ್ಲಿ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಅಲ್ ಹುದಾ ಜುಮಾ ಮಸೀದಿಯ ಸದಸ್ಯ ಮೋನಾಕ ಅವರು ಧ್ವಜಾರೋಹಣ ನೆರವೇರಿಸಿದರು. ಮುಹಮ್ಮದ್ ಇಕ್ಬಾಲ್ ಸಂದೇಶ ನೀಡಿದರು. ಇದೇ ಸಂದರ್ಭದಲ್ಲಿ ಡಿವಿಷನ್ ಕಾರ್ಯದರ್ಶಿ ರಿಯಾಝ್, ಏರಿಯಾ ಅಧ್ಯಕ್ಷ ಇಸ್ಮಾಯೀಲ್ ಎಂಜಿನಿಯರ್, ಕಾರ್ಯದರ್ಶಿ ಹಸೈನಾರ್ ಉಪಸ್ಥಿತರಿದ್ದರು.
ಶಾಂತಿನಗರ, ಕಾವೂರು:
ಶಾಂತಿನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೂಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಶೆರೀಫ್ ಕೂಳೂರು ಧ್ವಜಾರೋಹಣ ನಡೆಸಿದರು. ಇಬ್ರಾಹೀಂ ಪೇಜಾವರ ಸಂದೇಶ ನೀಡಿದರು. ಏರಿಯಾ ಅಧ್ಯಕ್ಷ ನೌಶಾದ್ ಕಾವೂರು, ಕಾರ್ಯದರ್ಶಿ ಶಬೀರ್, ನವಾಝ್ ಉಪಸ್ಥಿತರಿದ್ದರು.
ಜೋಕಟ್ಟೆ:
ಜೋಕಟ್ಟೆಯಲ್ಲಿ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರೆಂಟ್ ಜೋಕಟ್ಟೆ ಏರಿಯಾ ಅಧ್ಯಕ್ಷ ಮುಹಮ್ಮದ್ ರಫೀಕ್ ಧ್ವಜಾರೋಹಣ ನೆರವೇರಿಸಿದರು. ಜಮಾಲ್ ಸಂದೇಶ ನೀಡಿದರು. ಏರಿಯಾ ಕಾರ್ಯದರ್ಶಿ ಇಮ್ತಿಯಾಝ್, ಮಜೀದ್ ಉಪಸ್ಥಿತರಿದ್ದರು.
ಅಂಗರಗುಂಡಿ
ಅಂಗರಗುಂಡಿಯಲ್ಲಿ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರೆಂಟ್ ಅಂಗರಗುಂಡಿ ಯುನಿಟ್ ಅಧ್ಯ ಸಿದ್ದೀಕ್ ಧ್ವಜಾರೋಹಣ ನೆರವೇರಿಸಿದರು. ಹೈದರ್ ಹಬೀಬ್ ಸಂದೇಶ ನೀಡಿದರು. ಬದ್ರಿಯಾ ಮದ್ರಸದ ಸದರ್ ಉಸ್ತಾದ್ ಯಾಹ್ಯಾ ಸಖಾಫಿ ,ಅಡ್ವಕೇಟ್ ಮುಖ್ತಾರ್,ಯುನಿಟ್ ಕಾರ್ಯದರ್ಶಿ ಅನ್ವರ್ ಉಪಸ್ಥಿತರಿದ್ದರು.
ಸುಂಕದಕಟ್ಟೆ:
ಸುಂಕದಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬದ್ರಿಯಾ ಮಸೀದಿಯ ಅಧ್ಯಕ್ಷ ಸಾಹುದ್ದೀನ್ ಧ್ವಜಾರೋಹಣ ನೆರವೇರಿಸಿದರು. ಇಸ್ಮಾಯೀಲ್ ಸಂದೇಶ ನೀಡಿದರು. ಏರಿಯಾ ಅಧ್ಯಕ್ಷ ಸಬೀವುಲ್ಲಾ, ಕಾರ್ಯದರ್ಶಿ ರಹ್ಮತುಲ್ಲಾಹ್ ಉಪಸ್ಥಿತರಿದ್ದರು.
ಪಂಜಿಮೊಗರು:
ಪಂಜಿಮೊಗರುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಕಾವೂರು ವಲಯಾಧ್ಯಕ್ಷ ರಫೀಕ್ ಕೂಳೂರು ಧ್ವಜಾರೋಹಣ ನೆರವೇರಿಸಿದರು. ಇಬ್ರಾಹಿಂ ಪೇಜಾವರ ಸಂದೇಶ ನೀಡಿದರು. ನಿಸಾರ್, ಹನೀಫ್,ರಹೀಂ ಉಪಸ್ಥಿತರಿದ್ದರು.
ಪೊರ್ಕೋಡಿ:
ಪೊರ್ಕೋಡಿಯಲ್ಲಿ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಬದ್ರಿಯಾ ಮಸೀದಿ ಸದರ್ ಉಸ್ತಾದ್ ಅಬ್ದುಲ್ ಮುತ್ತಲಿಬ್ ಧ್ವಜಾರೋಹಣ ನೆರವೇರಿಸಿದರು. ಜಮಾಲ್ಸಂದೇಶ ನೀಡಿದರು. ಡಿವಿಷನ್ ಅಧ್ಯಕ್ಷ ಎ.ಕೆ.ಅಶ್ರಫ್,ಆರಿಫ್ ಪೊರ್ಕೋಡಿ ಉಪಸ್ಥಿತರಿದ್ದರು.