×
Ad

ಇಂದಿನಿಂದ ಎಸ್ಸೆಸ್ಸೆಫ್ ರಾಜ್ಯ ಪ್ರತಿನಿಧಿ ಸಮಾವೇಶ

Update: 2017-02-17 23:54 IST

ಮಂಗಳೂರು, ಫೆ.17: ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ಅಧೀನದಲ್ಲಿ ರಾಜ್ಯ ಮಟ್ಟದ ಪ್ರತಿನಿಧಿ ಸಮಾವೇಶ ‘ಸ್ಪ್ರಿಂಗ್’ ಫೆ.18 ಮತ್ತು 19ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಯಲಿದೆ.

 ಫೆ.18ರಂದು ಸಂಜೆ 4ಕ್ಕೆ ಅಬ್ದುಲ್ಲತೀಫ್ ಕರ್ನೂಲ್ ಶಾ ದರ್ಗಾ ಝಿಯಾರತ್‌ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ರಾತ್ರಿ 8ಕ್ಕೆ ಆಧ್ಯಾತ್ಮಿಕ ಸಂಗಮದೊಂದಿಗೆ ಸಮಾವೇಶ ಉದ್ಘಾಟನೆಗೊಳ್ಳಲಿದೆ.

ಫೆ.19ರಂದು ಬೆಳಗ್ಗೆ 9ರಿಂದ ವಿವಿಧ ಸೆಮಿನಾರ್‌ಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಎಂಎಸ್‌ಎಂ ಅಬ್ದುರ್ರಶೀದ್ ಝೈನಿ, ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷ ಶೌಕತ್ ನಈಮಿ ಕಾಶ್ಮೀರ, ಕೆಸಿಎಫ್ ಅಂತಾರಾಷ್ಟ್ರೀಯ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ, ಮೈಂಡ್ ಮಾಸ್ಟರಿ ಟ್ರೈನರ್ ಅಸ್ಸೈಯದ್ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ಮತ್ತಿತರರು ಭಾಗವಹಿಸುವರು.

ಸಂಜೆ ನಡೆಯುವ ಸಮಾರೋಪ ಸಮಾರಂಭವನ್ನು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹೀಂ ಉದ್ಘಾಟಿಸುವರು. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಎನ್‌ಕೆಎಂ ಶಾಫಿ ಸಅದಿ ಅಧ್ಯಕ್ಷತೆ ವಹಿಸುವರು. ಶಾಸಕ ಇಕ್ಬಾಲ್ ಅನ್ಸಾರಿ ವೆಬ್‌ಸೈಟ್ ಲಾಂಚಿಂಗ್ ಹಾಗೂ ರಾಘವೇಂದ್ರ ಹಿತ್ನಾಳ್ ‘ರೀಡ್ ಪ್ಲಸ್’ ಕೃತಿ ಬಿಡುಗಡೆಗೊಳಿಸುವರು ಎಂದು ರಾಜ್ಯ ಪ್ರ.ಕಾರ್ಯದರ್ಶಿ ಎಂ.ಬಿ.ಮುಹಮ್ಮದ್ ಸಾದಿಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News