×
Ad

ಫುಟ್‌ಪಾತ್‌ನಲ್ಲಿ ವಾಹನ ಪಾರ್ಕಿಂಗ್‌ಗೆ ಆಕ್ಷೇಪ

Update: 2017-02-17 23:54 IST

ಮಂಗಳೂರು, ೆ.17: ನಗರದ ಬಹುತೇಕ ುಟ್‌ಪಾತ್‌ನಲ್ಲಿ ವಾಹನ ಪಾರ್ಕಿಂಗ್ ಮಾಡುವುದರಿಂದ ಭಾರೀ ಸಮಸ್ಯೆಯಾಗುತ್ತಿದೆ. ಮಕ್ಕಳು, ವೃದ್ಧರು ರಸ್ತೆಯಲ್ಲಿ ಭೀತಿಯಿಂದ ನಡೆಯುವಂತಹ ಅನಿವಾರ್ಯತೆ ಇದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ‘ನೇರ ೆನ್ ಇನ್ ಕಾರ್ಯಕ್ರಮ’ದಲ್ಲಿ ಸಾರ್ವಜನಿಕರೊಬ್ಬರು ಒತ್ತಾಯಿಸಿದರು.

ಲೇಡಿಗೋಷನ್ ಆಸ್ಪತ್ರೆ ಬಳಿಯ ಬಸ್ ತಂಗುದಾಣದಲ್ಲಿ ಬೀದಿ ಕಾಮಣ್ಣರ ಹಾವಳಿ, ಹೊಗೆ ಬಝಾರ್‌ನಲ್ಲಿ ರಾತ್ರಿ ವೇಳೆ ಗೂಡ್ಸ್ ರೈಲುಗಳಿಂದ ಶಬ್ದ ಮಾಲಿನ್ಯ ಇತ್ಯಾದಿ ಹಲವು ಸಮಸ್ಯೆಗಳ ಬಗ್ಗೆ 27 ಕರೆಗಳು ಬಂದಿದ್ದು, ಬಹುತೇಕ ಕರೆಗಳು ಟ್ರಾಫಿಕ್ ಸಮಸ್ಯೆಗೆ ಸಂಬಂಧಿಸಿದ್ದಾಗಿದೆ. ನಗರದ ಲೇಡಿಗೋಷನ್ ಆಸ್ಪತ್ರೆ ಎದುರಿನ ಬಸ್ ತಂಗುದಾಣದಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸುವ ಕೃತ್ಯ ನಡೆಯುತ್ತಿದೆ. ಅಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಬೇಕು ಮತ್ತು ಕದ್ರಿ ಕಂಬಳ ಜಂಕ್ಷನ್‌ನಲ್ಲಿ ವೃತ್ತವನ್ನು ಪುನ: ಸ್ಥಾಪಿಸಲು ಹಾಗೂ ಪಡೀಲ್‌ನಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂಬ ಬೇಡಿಕೆ ಕೇಳಿ ಬಂತು. ‘ಬಸ್ ಬೇ’ನಲ್ಲಿ ಬಸ್ ನಿಲ್ಲಿಸದಿರುವುದು, ಬೋಂದೆಲ್ ದೇವಿನಗರದಲ್ಲಿ ರಸ್ತೆಯಲ್ಲಿಯೇ ವಾಹನಗಳ ನಿಲುಗಡೆ ಮಾಡುವ ಬಗ್ಗೆ, ಕುಲಶೇಖರ ಚರ್ಚ್ ಕಾಂಪೌಂಡ್ ಬಳಿ ನಾಯಿ ಸಮಸ್ಯೆ, ರಿಕ್ಷಾ ಚಾಲಕರಿಂದ ಅಧಿಕ ಬಾಡಿಗೆ ದರ ವಸೂಲಿ ಮಾಡಲಾಗುತ್ತಿದೆ ಎಂದು ದೂರಲಾಯಿತು. ಪಡೀಲ್ ಕಡೆ ಸಂಚರಿಸುವ ಸಿಟಿ ಬಸ್‌ಗಳಲ್ಲಿ ಸಂಜೆ ಹೊತ್ತು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಮಹಿಳೆಯರು ಅಹವಾಲು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದರು. ಮೀನಿನ ಲಾರಿಗಳು ರಸ್ತೆಗೆ ನೀರು ಚೆಲ್ಲುತ್ತಿರುವ ವಿಷಯ ಮತ್ತೆ ಪ್ರಸ್ತಾಪವಾಯಿತು. ಗ್‌ಟಿ ಸ್ಕೀಂಗಳ ವಿಚಾರದಲ್ಲಿ ೆನ್ ಮಾಡಿ ಯೋಜನೆಗೆ ಸೇರುವಂತೆ ಒತ್ತಾಯಿಸುತ್ತಿರುವ ಬಗ್ಗೆ ಮಹನೀಯರೊಬ್ಬರು ಗಮನಕ್ಕೆ ತಂದರು. ಕದ್ರಿ ಪೊಲೀಸ್ ಠಾಣೆ ಎದುರಿನ ಯುದ್ಧ ಸ್ಮಾರಕದ ಅಕ್ಕ ಪಕ್ಕದಲ್ಲಿ ವಾಹನಗಳ ನಿಲುಗಡೆ ಮಾಡುತ್ತಿದ್ದು, ಅವುಗಳನ್ನು ತೆರವು ಮಾಡಬೇಕೆಂದು ಒತ್ತಾಯಿಸಿದರು. ಡಿಸಿಪಿ ಡಾ.ಸಂಜೀವ ಎಂ. ಪಾಟೀಲ್ ಮತ್ತು ಎಸಿಪಿ ವೆಲೆಂಟೈನ್ ಡಿಸೋಜ ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ ಉತ್ತರಿಸಿದರು. ಎಸಿಪಿ ತಿಲಕ್ ಚಂದ್ರ, ಇನ್‌ಸ್ಪೆಕ್ಟರ್ ರಫೀಕ್, ಎಎಸ್ಸೈ ಯೂಸ್ು, ಸಿಬ್ಬಂದಿ ಪುರುಷೋತ್ತಮ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News