×
Ad

ವಾಂಟೆಡ್ ನಕ್ಸಲ್ ಭೂವಿವಾದಕ್ಕೆ ಬಲಿ

Update: 2017-02-18 14:46 IST

ಜಮಷೆಡ್ಪುರ,ಫೆ.18: ಪೂರ್ವ ಸಿಂಗಭೂಮ್ ಜಿಲ್ಲೆಯ ನಕ್ಸಲ್ ಪೀಡಿತ ಗೋರಬಂಧಾ ಪೊಲೀಸ್ ಠಾಣಾ ವ್ಯಾಪ್ತಿಯ ಪವದಾದಿ ಗ್ರಾಮದಲ್ಲಿ ಪೊಲೀಸರ ವಾಂಟೆಡ್ ಪಟ್ಟಿಯಲ್ಲಿದ್ದ ನಕ್ಸಲ್‌ನೋರ್ವ ಭೂ ವಿವಾದದಲ್ಲಿ ಕೊಲೆಯಾಗಿದ್ದಾನೆ.

ಲುಕ್ರು ಸರ್ದಾರ್ ಕೊಲೆಯಾಗಿರುವ ವ್ಯಕ್ತಿ. ಭೂ ವಿವಾದದ ಹಿನ್ನೆಲೆಯಲ್ಲಿ ಅದೇ ಗ್ರಾಮದ ಥುಂಪು ಸರ್ದಾರ್ ಎಂಬಾತ ಶುಕ್ರವಾರ ರಾತ್ರಿ ಆತನನ್ನು ಕಲ್ಲಿನಿಂದ ಜಜ್ಜಿ ಕೊಂದಿದ್ದಾನೆ ಎಂದು ಡಿಎಸ್‌ಪಿ ಅಜಿತ್ ಕುಮಾರ್ ತಿಳಿಸಿದರು.

ನಕ್ಸಲ್ ಸಂಬಂಧಿ ಕೆಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಲುಕ್ರು ಮಾವೋವಾದಿ ನಾಯಕ ಸುಪಾಯಿ ತುಡು ಬಣಕ್ಕೆ ಸೇರಿದ್ದ. ತುಡು ಕಳೆದ ತಿಂಗಳು ಭದ್ರತಾ ಸಿಬ್ಬಂದಿಗಳ ಎನಕೌಂಟರ್‌ಗೆ ಬಲಿಯಾಗಿದ್ದಾನೆ.

ಲುಕ್ರು ಶವ ಶನಿವಾರ ಬೆಳಿಗ್ಗೆ ಪತ್ತೆಯಾಗಿದ್ದು, ಥುಂಪು ಸರ್ದಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News