×
Ad

ಪೇಟಿಎಂ ಇತ್ಯಾದಿ ಇ - ವಾಲೆಟ್ ಗಳಿಗೆ ಭವಿಷ್ಯವಿಲ್ಲ : ಎಚ್ ಡಿ ಎಫ್ ಸಿ ಬ್ಯಾಂಕ್ ಎಂಡಿ ಆದಿತ್ಯ ಪುರಿ

Update: 2017-02-18 17:15 IST

ಹೊಸದಿಲ್ಲಿ,ಫೆ.18 : ನೋಟು ಅಮಾನ್ಯೀಕರಣದ ನಂತರ ಸರಕಾರವು ಡಿಜಿಟಲ್ ವ್ಯವಹಾರಗಳಿಗೆ ಹೆಚ್ಚು ಒತ್ತು ನೀಡುತ್ತಿರುವಂತೆಯೇ ಡಿಜಿಟಲ್ ವಾಲೆಟ್ ಗಳಿಗೆ ಭವಿಷ್ಯವಿಲ್ಲ ಎಂದು ಎಚ್ ಡಿ ಎಫ್ ಸಿ ಬ್ಯಾಂಕಿನ ಆಡಳಿತ ನಿರ್ದೇಶಕ ಆದಿತ್ಯ ಪುರಿ ಹೇಳಿದ್ದಾರೆ.

ಅಮಾನ್ಯೀಕರಣದ ನಂತರ ಖರೀದಿಗಳಿಗೆ ಯಾವ ಇ-ವಾಲೆಟ್ ಮುಖಾಂತರ ಹಣ ಪಾವತಿ ಸುಲಭವಾಗುತ್ತದೆಯೋ ಜನರುಅದಕ್ಕೇ ಮೊರೆ ಹೋಗುತ್ತಿದ್ದಾರೆ. ಆದರೆ ನಗದು ಪಾವತಿಗೆ ಪರ್ಯಾಯಗಳು ಲಭ್ಯವಾಗುತ್ತಿದ್ದಂತೆಯೇ ಸದ್ಯ ಇ-ವಾಲೆಟ್ ಗಳನ್ನು ಅವಲಂಬಿಸಿರುವ ಬಳಕೆದಾರರು ಮುಂದೆ ಸರಳ ಡಿಜಿಟಲ್ ಪ್ಲಾಟ್‌ಫಾರ್ಮ್ ಗಳನ್ನು ಆಯ್ದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಪೇಟಿಎಂ ಅನ್ನೂ ಉಲ್ಲೇಖಿಸಿದ ಅವರು ಅದು ಇನ್ನೊಂದು ಅಲಿಬಾಬ ಆಗಲು ಸಾಧ್ಯವಿಲ್ಲ ಪೇಟಿಎಂ ಸದ್ಯ ರೂ. 1,600 ಕೋಟಿ ನಷ್ಟ ಅನುಭವಿಸುತ್ತಿದೆ ಎಂದು ಅವರು ಹೇಳಿದರಲ್ಲದೆ ಭವಿಷ್ಯದಲ್ಲಿ ಯುಪಿಐ ನಂತಹ ಪದ್ಧತಿಯನ್ನು ಜನರು ಹೆಚ್ಚು ನೆಚ್ಚಿಕೊಳ್ಳಲಿದ್ದಾರೆ. ಇಂತಹ ಪದ್ಧತಿ ಬ್ಯಾಂಕ್ ಖಾತೆಗಳಿಂದಲೇ ನೇರ ಹಣ ವರ್ಗಾವಣೆ ಮಾಡುತ್ತವೆ ಎಂದು ಅವರು ಹೇಳಿದರು.

ಇ-ವಾಲೆಟ್ ಗಳಿಗೆ ತಮ್ಮದೇ ಆದ ಇತಿಮಿತಿಗಳಿವೆ ಹಾಗೂ ಹಣ ವರ್ಗಾಯಿಸಬೇಕಾದರೆ ಹಣ ಪಾವತಿ ಮಾಡುವವರು ಹಾಗೂ ಹಣ ಸ್ವೀಕರಿಸುವವರಿಬ್ಬರ ಬಳಿಯೂ ಒಂದೇ ಖಾತೆಯಿರಬೇಕಾಗಿದೆ. ಮೇಲಾಗಿ ಇ-ವಾಲೆಟ್ ಗೆ ವರ್ಗಾವಣೆಯಾದ ಹಣಕ್ಕೆ ಬಡ್ಡಿ ದೊರೆಯುವುದಿಲ್ಲ. ಸಣ್ಣ ವರ್ತಕರು ತಿಂಗಳೊಂದರಲ್ಲಿ ಇ-ವಾಲೆಟ್ ನಿಂದ

ರೂ. 25,000ಕ್ಕಿಂತ ಹೆಚ್ಚು ಹಣವನ್ನು ಹಿಂಪಡೆಯುವಂತಿಲ್ಲವಾಗಿದೆ ಎಂದು ಪುರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News