×
Ad

ತಾಯಿ ಪ್ರೀತಿಗೆ ಬದಲಿಯಿಲ್ಲ: ಸುಪ್ರೀಂಕೋರ್ಟು ಮಹತ್ವದ ತೀರ್ಪು

Update: 2017-02-18 17:33 IST

ಹೊಸದಿಲ್ಲಿ,ಫೆ. 18: ತಂದೆತಾಯಿ ವಿವಾಹವಿಚ್ಛೇದನ ಪಡೆದುಕೊಂಡ ಹಿನ್ನೆಲೆಯಲ್ಲಿ 21 ತಿಂಗಳು ವಯಸ್ಸಾಗಿದ್ದಾಗ ಅಮ್ಮನಿಂದ ಬೇರ್ಪಡಬೇಕಾಗಿ ಬಂದಿದ್ದ ಎಂಟು ವರ್ಷದ ಬಾಲಕಿಯ ಸಂರಕ್ಷಣೆಯ ಹೊಣೆಯನ್ನು ಅಮ್ಮನಿಗೆ ವಹಿಸಿಕೊಟ್ಟು ಕೋರ್ಟು ಆದೇಶಿಸಿದೆ. ತಂದೆಯ ಪ್ರೀತಿ ತಾಯಿ ಪ್ರೀತಿಗೆ ಬದಲಿಯಲ್ಲ.

ತಾಯಿ ಜೊತೆಗೆ ಬದುಕದೆ ಅದರ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ ಎಂದು ಕೋರ್ಟು ಅಭಿಪ್ರಾಯ ವ್ಯಕ್ತಪಡಿಸಿದ್ದು, ಜಸ್ಟಿಸ್ ಜೆ. ಚೆಲಮೇಶ್ವರ್, ಎ.ಕೆ.ಸಿಕ್ರಿ ಅವರ ಪೀಠ ಬಾಲಕಿಯ ಸಂರಕ್ಷಣೆಯ ಹೊಣೆಯನ್ನು ತಾಯಿಗೆ ವಹಿಸಿಕೊಟ್ಟಿದೆ. ಸೈನ್ಯದಲ್ಲಿ ಉದ್ಯೋಗಿ ತಂದೆ ಮತ್ತು ಅಧ್ಯಾಪಿಕೆಯಾದ ತಾಯಿ ವಿವಾಹವಿಚ್ಛೇದನ ಮಾಡಿಕೊಂಡಿದ್ದರು.

ನಂತರ ಮಗುವನ್ನುಸಾಕುವ ಹೊಣೆ ತಂದೆಗೆ ಸಿಕ್ಕಿತ್ತು. ಕುಟುಂಬ ಕೋರ್ಟಿನಲ್ಲಿ ಅಮ್ಮ ಇದನ್ನು ಪ್ರಶ್ನಿಸಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ. ನಂತರ ಅವರು ಹೈಕೋರ್ಟಿನ ಕದ ತಟ್ಟಿದ್ದರು. ಹೈಕೋರ್ಟು ಬಾಲಕಿಯ ಪೋಷಣೆಯ ಜವಾಬ್ದಾರಿಕೆಯನ್ನು ಅಮ್ಮನಿಗೆ ವಹಿಸಿಕೊಟ್ಟಿತ್ತು.

ಇದನ್ನು ಪ್ರಶ್ನಿಸಿ ತಂದೆ ಸುಪ್ರೀಂಕೋರ್ಟಿನಲ್ಲಿ ಅರ್ಜಿ ದಾಖಲಿಸಿದ್ದರು. ತಾನು ತಂದೆಯ ಜೊತೆಯೇ ಇರುತ್ತೇನೆಂದು ಬಾಲಕಿ ಕೋರ್ಟು ನಿಯೋಜಿಸಿದ್ದ ಅಧಿಕಾರಿಯ ಮುಂದೆ ಹೇಳಿಕೆ ನೀಡಿದ್ದಳು. ತಂದೆ ಕೂಡಾ ಮಗುವಿಗೆ ಎಲ್ಲ ರೀತಿಯ ಸಂರಕ್ಷಣೆಯು ತನ್ನಿಂದ ಲಭಿಸುತ್ತಿದೆ ಎಂದು ಕೋರ್ಟಿಗೆ ಸ್ಪಷ್ಟಪಡಿಸಿದ್ದರು. ಆದರೆ ಕೋರ್ಟಿನ ತೀರ್ಪು ತದ್ವಿರುದ್ಧ ಬಂದಿದೆ.

ಒಂದು ವರ್ಷ ಬಾಲಕಿಯ ಹೊಣೆಯನ್ನು ತಾಯಿಗೆ ವಹಿಸಿಕೊಟ್ಟಿದ್ದು, ಅಮ್ಮ ಅಧ್ಯಾಪಕಿಯಾಗಿರುವ ದಿಲ್ಲಿಯ ಸ್ಕೂಲ್‌ಗೆ ಬಾಲಕಿಯನ್ನು ಸೇರಿಸಬೇಕೆಂದು ಕೋರ್ಟು ಆದೇಶಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News