ಕಾಲೇಜು ವಿದ್ಯಾರ್ಥಿನಿ ನವವಧುವಿನ ಸಾವು- ಪತಿ ಮತ್ತು ಅತ್ತೆಯ ಬಂಧನ
ಶ್ರೀಕಂಠಪುರ,ಫೆ. 18: ಕೇರಳ ಕಣ್ಣೂರ್ ಸಮೀಪದ ಪೈಸಕ್ಕರಿ, ದೇವಮಾತಾ ಕಾಲೇಜಿನ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿನಿ ಆನ್‌ಮರಿಯ(18) ಸಾವಿಗೆ ಸಂಬಂಧಿಸಿ ಆಕೆಯ ಪತಿ ಬಸ್ ಚಾಲಕ ಪೂಪ್ಪರಂಬ್ ಪಳ್ಳಿಯಾರ್ ಝೋಬಿನ್(28) ಮತ್ತು ಝೋಬಿನ್‌ನ ತಾಯಿ ಪಳ್ಳಿಯಾರ್ ಮೇರಿ(50) ಎಂಬಿಬ್ಬರನ್ನು ತಳಿಪ್ಪರಂಬ್ ಡಿವೈಎಸ್ಪಿ ಕೆ.ವಿ. ವೇಣುಗೋಪಾಲ್, ಕಡಿಯಾನ್ಮಲ ಎಸ್ಸೈ ಎಂಪಿ. ವಿನೀಶ್ ಕುಮಾರ್ ಬಂಧಿಸಿದ್ದಾರೆ. ಝೋಬಿನ್‌ನ ತಂದೆಯನ್ನು ಕೂಡಾ ಪೊಲೀಸರು ವಶಕ್ಕೆಪಡೆದು ಪ್ರಶ್ನಿಸುತ್ತಿದ್ದಾರೆ. ಆದರೆ ಅವರನ್ನು ಬಂಧಿಸಿದ ಕುರಿತು ಪೊಲೀಸರು ದೃಢೀಕರಿಸಿಲ್ಲ.
ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ತಾಯಿಮಗನನ್ನು ಬಂಧಿಸಲಾಗಿದೆ. ಆನ್ಮರಿಯಾರನ್ನು ಪತಿಗೃಹದಲ್ಲಿ ವಿಷ ಸೇವಿಸಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಪರಿಯಾರಂ ವ್ಯೆದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ನಂತರ ಕಲ್ಲಿಕೋಟೆ ಮಿಂಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆನ್‌ಮೇರಿ ಚಿಕಿತ್ಸೆ ಫಲಕಾರಿಯಾಗದೆ ಎರಡು ವಾರಗಳ ಹಿಂದೆ ಮೃತಪಟ್ಟಿದ್ದರು. ಆದರೆ ಕೇವಲ ನಾಲ್ಕುತಿಂಗಳ ಹಿಂದೆಯಷ್ಟೆ ಆನ್‌ಮೇರಿ ಮತ್ತು ಝೋಬಿನ್ ಮದುವೆಯಾಗಿದ್ದರು. ಆ ಬಳಿಕ ಆನ್‌ಮೇರಿ ಪತಿಯ ಪೂಪ್ಪರಂಬ್‌ನ ಮನೆಯಲ್ಲಿ ವಾಸಿಸುತ್ತಿದ್ದರು.ಮಗಳ ಸಾವಿನಲ್ಲಿ ನಿಗೂಢತೆಯಿದೆ ಎಂದು ಆರೋಪಿಸಿ ಆನ್‌ಮೇರಿಯ ತಾಯಿ ಅನಿಪೊಲೀಸರಿಗೆ ದೂರು ನೀಡಿದ್ದರು. ಪತಿಮನೆಯಲ್ಲಿ ತಪಾಸಣೆ ನಡೆಸಿದಾಗ ಪೊಲೀಸರಿಗೆ ಆತ್ಮಹತ್ಯೆಯ ಕುರಿತ ಆನ್‌ಮೇರಿ ಬರೆದಿದ್ದಾರೆನ್ನಲಾದ ಪತ್ರ ದೊರಕಿದೆ. ಆನ್‌ಮೇರಿಯ ಗೆಳತಿಯರು ಮತ್ತು ಪರಿಸರದ ನಿವಾಸಿಗಳಲ್ಲಿ ವಿವರವಾದ ಸಾಕ್ಷ್ಯ ಪಡೆದ ಬಳಿಕ ಆನ್‌ಮೇರಿಯ ಪತಿ ಮತ್ತು ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತಮ ಕವಿಯತ್ರಿ ಹಾಗೂ ಕಲಿಕೆಯಲ್ಲಿ ಮುಂದಿದ್ದ ಆನ್‌ಮೇರಿ,ಝೊಬಿನ್‌ನ್ನು ಅನಿರೀಕ್ಷಿತವಾಗಿ ಮದುವೆಯಾದುದು ಆಕೆಯ ಮನೆಯವರಲ್ಲಿ ಅಗಾಧ ನೋವಿಗೆ ಕಾರಣವಾಗಿತ್ತು ಎಂದು ವರದಿ ತಿಳಿಸಿದೆ.