ಪುತ್ತೂರು: ಫೆ..20ರಂದು ಬದ್ರಿಯಾ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ
ಪುತ್ತೂರು, ಫೆ.18: ತಾಲೂಕಿನ ಕಾವು ಕುಡ್ಪುನಡ್ಕ ಬದ್ರಿಯಾ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿ ತಿಂಗಳು ಆಧ್ಯಾತ್ಮಿಕ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭ ಫೆ.20ರಂದು ನಡೆಯಲಿದೆ ಎಂದು ಮಜ್ಲಿಸ್ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅರಿಯಡ್ಕ ತಿಳಿಸಿದ್ದಾರೆ.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಸ್ಸಯ್ಯದ್ ಹಾಫಿಳ್ ಫಕ್ರುದ್ದೀನ್ ಅಲ್ ಹದ್ದಾದ್ ತಂಙಳ್ ಅವರ ನೇತೃತ್ವದಲ್ಲಿ ಅನಾಥ, ಬಡ ಹಾಗೂ ನಿರ್ಗತಿಕ ಮಕ್ಕಳ ಸಾಮಾಜಿಕ, ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಮತ್ತು ಸಮಾಜಸೇವೆ ಉದ್ದೇಶದಿಂದ ಬದ್ರಿಯಾ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಆರಂಭಿಸಲಾಗಿದೆ. ಇದರ ಪೂರ್ವಭಾವಿಯಾಗಿ ಬದ್ರಿಯಾ ಮಜ್ಲೀಸ್ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಅಬ್ದುಲ್ ಮಜೀದ್ ಸಖಾಫಿ ಅಲ್ ಖಾಮಿಲ್ ಕುಟ್ಟಶ್ಶೇರಿ ಮಲಪ್ಪುರಂ ಉದ್ಘಾಟಿಸಲಿದ್ದಾರೆ. ಸಮಸ್ತ ಜಂಯಿಯತ್ತುಲ್ ಉಲಮಾ ಉಪಾದ್ಯಕ್ಷ ತಾಜುಶ್ಶರಿಯಾ ಆಲಿಕುಂಞಿ ಉಸ್ತಾದ್ ದುವಾ ನೆರವೇರಿಸಲಿದ್ದಾರೆ. ಎಸ್‌ವೈಎಸ್ ರಾಜ್ಯಾಧ್ಯಕ್ಷ ಹುಸೈನ್ ಸದಿ ಕೆ.ಸಿ.ರೋಡು ಪ್ರಭಾಷಣ ನೀಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಅಧ್ಯಕ್ಷ ಅಸ್ಸಯ್ಯದ್ ಹಾಫಿಳ್ ಫಕ್ರುದ್ದೀನ್ ಅಲ್ ಹದ್ದಾದ್ ತಂಙಳ್, ಕಾರ್ಯದರ್ಶಿ ಅಮೀರಲಿ ಝುಹ್‌ರಿ, ಸ್ವಾಗತ ಸಮಿತಿ ಕಾರ್ಯದರ್ಶಿ ಅಬ್ದುಲ್ ಹಮೀದ್, ಕೋಶಾಧಿಕಾರಿ ಅಬ್ದುಲ್ ಕರೀಂ ಚೆನ್ನಾವರ, ಸಂಚಾಲಕ ಅಬ್ದುಲ್ ಲತೀಫ್ ಸಖಾಫಿ, ಮೊಯ್ದು ಹಾಜಿ ಕಾವು ಉಪಸ್ಥಿತರಿದ್ದರು.