×
Ad

ಪುತ್ತೂರು: ಗ್ಲೋಬಲ್ ಫ್ರೆಂಡ್ಸ್‌ನಿಂದ ರಕ್ತದಾನ ಶಿಬಿರ, ಗ್ಲೋಬಲ್ ಅವಾರ್ಡ್ ಪ್ರದಾನ

Update: 2017-02-18 18:15 IST

ಪುತ್ತೂರು, ಫೆ.18: ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್(ಬಿಜಿಎಫ್) ವತಿಯಿಂದ ರಕ್ತದಾನ ಶಿಬಿರ ಮತ್ತು ಗ್ಲೋಬಲ್ ಅವಾರ್ಡ್-2017 ಪ್ರದಾನ ಸಮಾರಂಭ ಪುತ್ತೂರಿನ ಬ್ಲಡ್ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮದಲ್ಲಿ 6 ತಿಂಗಳಲ್ಲಿ ಕುರ್‌ಆನ್ ಕಂಠಪಾಠ ಮಾಡಿದ ಕೆಐಸಿಯ ವಿದ್ಯಾರ್ಥಿ ಹಾಫಿರ್ ಮೊಹಮ್ಮದ್ ಸಾಲಿಂ ಅವರಿಗೆ ಗ್ಲೋಬಲ್ ಅವಾರ್ಡ್ ನೀಡಿ ಅಭಿನಂದಿಸಲಾಯಿತು.

ಬಿಜಿಎಫ್ ಗೌರವ ಅಧ್ಯಕ್ಷ ಹಾಜಿ ಎ. ಸಿರಾಜುದ್ದೀನ್ ಫೈಝಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ರಕ್ತದಾನ ಮಹಾದಾನವಾಗಿದ್ದು, ನಮ್ಮ ರಕ್ತವನ್ನು ಹಂಚುವ ಮೂಲಕ ಇನ್ನೊಬ್ಬರ ಜೀವವನ್ನು ಉಳಿಸಿದ ಪುಣ್ಯ ಲಭಿಸುತ್ತದೆ. ಯುವಕರು ಹೆಚ್ಚು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಬಿಜಿಎಫ್‌ನ ಯುವಕರು ಹಲವಾರು ಸಮಾಜಮುಖೀ ಕೆಲಸಗಳನ್ನು ಮಾಡುತ್ತಿದ್ದು, ಬಡ ಹೆಣ್ಣುಮಕ್ಕಳ ವಿವಾಹ, ಅನಾಥರಿಗೆ, ರೋಗಿಗಳಿಗೆ, ಅಶಕ್ತರಿಗೆ ಆರ್ಥಿಕ ನೆರವು ನೀಡುವ ಮೂಲಕ ಉತ್ತಮ ಕಾರ್ಯ ನಡೆಸುತ್ತಿದ್ದಾರೆ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತ ಸಂಶುದ್ದೀನ್ ಸಂಪ್ಯ ಮಾತನಾಡಿ ಬಿಜಿಎಫ್ ನಿರಂತರ ಸಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು, ಪ್ರಚಾರದ ತೀಟೆಗೆ ಬೀಳದೆ ಸಮಾಜಿಕ ಕಾಳಜಿಯೊಂದಿಗೆ ಕೆಲಸ ಮಾಡುತ್ತಿರುವುದು ಉತ್ತಮ ವಿಚಾರ ಎಂದರು.

ರೋಟರಿ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿ ರಕ್ತದಾನದ ಮಹತ್ವದ ಬಗ್ಗೆ ತಿಳಿಸುತ್ತಾ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪುರುಷರೂ 3 ತಿಂಗಳಿಗೊಮ್ಮೆ ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಪುತ್ತೂರು ಬ್ಲಡ್ ಬ್ಯಾಂಕ್‌ನಲ್ಲಿ 60 ಸಾವಿರಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದ್ದಾರೆ ಎಂದರು.

ಬಪ್ಪಳಿಗೆ ಮಸೀದಿ ಕಮಿಟಿ ಅಧ್ಯಕ್ಷ ಅಬ್ದುಲ್ ಹಮೀದ್ ಲೌಲಿ, ಪ್ರಧಾನ ಕಾರ್ಯದರ್ಶಿ ವಿ.ಕೆ. ಶರೀಫ್ ಬಪ್ಪಳಿಗೆ, ಪುತ್ತೂರು ರೇಂಜ್ ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷ ಝಾಕಿರ್ ಹನೀಫ್ ಶುಭ ಹಾರೈಸಿದರು.

ಬಿಜಿಎಫ್ ಅಧ್ಯಕ್ಷ ಝುಬೈರ್ ಯು.ಕೆ, ಉಪಾಧ್ಯಕ್ಷ ಶೇಖ್ ಅಶ್ಪಖ್ , ಪತ್ರಕರ್ತ ಶೇಖ್ ಜೈನುದ್ದೀನ್, ಇಕ್ಬಾಲ್ ಯು.ಕೆ, ಶಮೀರ್, ಆಸಿಫ್, ಮೋನು, ಮನ್ಸೂರ್, ಉರೈಸ್, ಉನೈರ್, ದಾವೂದ್, ನಾಸಿರ್, ಇರ್ಫಾನ್, ನಿಝಾಮ್, ಅಲ್ತಾಫ್ ಯು.ಕೆ, ಫಯಾರ್, ಸುಲೈಮಾನ್, ಸವಾದ್, ಸಜಾಬ್, ಬಾತಿಶ್, ನಾಸಿರ್, ಆಶಿಕ್ , ಶರೀಫ್, ಕಲಂದರ್, ಶಾಫಿ, ರಿಯಾರ್, ರಾಹಿಲ್, ಇಕ್ಬಾಲ್, ಹನೀಫ್, ಇಂತಿಯಾರ್, ಸಮೀರ್, ಡಾ. ಶರ್ಫ್‌ರಾರ್, ಮುಝಮ್ಮಿಲ್, ಸಫ್ವಾನ್, ಹಾರಿಸ್ ಮತ್ತಿತರರು ಉಪಸ್ಥಿತರಿದ್ದರು.

ಬಪ್ಪಳಿಗೆ ವಲ್ಡ್ ಕಮಿಟಿ ಮತ್ತು ಬಿಬಿ ಬಾಯ್ಸ್ ಬಪ್ಪಳಿಗೆ ಸಹಕರಿಸಿದರು. ಆರ್.ಕೆ. ಮಲ್ಟಿಜಿಮ್ ಕಲ್ಲಾರೆ ಪ್ರಾಯೋಜಕತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News