ಮಂಗಳೂರು: ಯುವತಿ ನಾಪತ್ತೆ
ಮೂಡುಬಿದಿರೆ, ಫೆ.18: ತೆಂಕಮಿಜಾರು ಗ್ರಾಮದ ಪೂಮಾರಪದವು ಎಂಬಲ್ಲಿ ಸುಮರು 1 ವರ್ಷದಿಂದ ವಾಸಿಸುತ್ತಿರುವ ಬಸಪ್ಪ ಅವರ ಪುತ್ರಿ ಭಾಗ್ಯಶ್ರೀ (19.) ಕಳೆದ ಫೆ 12ರಿಂದ ಮನೆಯಿಂದ ಕಾಣೆಯಾಗಿರುವುದಾಗಿ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಲವಳಸರ ಹಳ್ಳಿಯ ಈ ಕುಟುಂಬವು ಕೂಲಿ ಕೆಲಸ ಮಾಡಿಕೊಂಡು ಸುಮಾರು 1 ವರ್ಷದಿಂದ ಪೂಮಾರಪದವಿನಲ್ಲಿ ವಾಸವಾಗಿತ್ತು.
ಫೆ.11 ರಂದು ರಾತ್ರಿ 10:30 ಕ್ಕೆ ಭಾಗ್ಯಶ್ರೀ ಮನೆಯವರೊಂದಿಗೆ ಊಟಮಾಡಿ ಮಲಗಿದ್ದು, ಮರುದಿನ ಬೆಳಗ್ಗೆ 4:30.ಕ್ಕೆ ಕಾಣೆಯಾಗಿರುವುದು ಮನೆಯವರ ಗಮನಕ್ಕೆ ಬಂದಿದೆ. ಮನೆಯವರು ಸುತ್ತಮುತ್ತಲಿನ ಪರಿಸರದಲ್ಲಿ, ಸ್ವಂತ ಊರಿನಲ್ಲಿ ಹಾಗೂ ಅವರ ಊರಿನವರು ಕೆಲಸ ಮಾಡುತ್ತಿರುವ ಕಾವೂರು, ಬಜಪೆ,ಕಿನ್ನಿಗೋಳಿ,ಮೂಲ್ಕಿ ಮೊದಲಾದ ಕಡೆಗಳಲ್ಲಿ ಹುಡುಕಾಡಿದರೂ ಈಕೆ ಪತ್ತೆಯಾಗಿಲ್ಲ.
ಎಣ್ಣೆ ಕಪ್ಪು ಮೈಬಣ್ಣ, 5 ಅಡಿ ಎತ್ತರ, ದುಂಡು ಮುಖ,ಕನ್ನಡ ಭಾಷೆ ತಿಳಿದಿರುವ ಭಾಗ್ಯಶ್ರೀ ನಾಪತ್ತೆಯಾದ ಸಂದರ್ಭದಲ್ಲಿ ಅರಸಿನ ಬಣ್ಣದ ಚೂಡಿದಾರ ಧರಿಸಿದ್ದಳು ಎನ್ನಲಾಗಿದೆ. ಈಕೆಯ ಬಗ್ಗೆ ಮಾಹಿತಿ ತಿಳಿದವರು ಪೊಲೀಸು ಆಯುಕ್ತರು: 0824-2220801,2220800; ಮೂಡುಬಿದಿರೆ ಪೊಲೀಸು ಠಾಣೆ: 08258-236333 ಸಂಪರ್ಕಿಸಿ ಸಹಕರಿಸುವಂತೆ ಮೂಡುಬಿದಿರೆ ಪೊಲೀಸು ಠಾಣಾಧಿಕಾರಿಯವರ ಪ್ರಕಟಣೆ ತಿಳಿಸಿದೆ.