ಉಡುಪಿ: ಕುತ್ಪಾಡಿ ಎಸ್‌ಡಿಎಂಗೆ ನೇಪಾಳ ತಂಡ ಭೇಟಿ
Update: 2017-02-18 18:29 IST
ಉಡುಪಿ, ಫೆ.18: ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಗೆ ನೇಪಾಳದ ತ್ರಿಭುವನ ವಿಶ್ವವಿದ್ಯಾಲಯದ ಆಯುರ್ವೇದ ವಿದ್ಯಾರ್ಥಿಗಳ ತಂಡವು ಇತ್ತೀಚೆಗೆ ಭೇಟಿ ನೀಡಿತು.
ಆಸ್ಪತ್ರೆಯಲ್ಲಿ ನಡೆಯುವ ಪಂಚಕರ್ಮ, ಯೋಗ, ಪ್ರಾಣಾಯಾಮ, ಕ್ಷಾರ ಸೂತ್ರ, ಪಥ್ಯಕಲ್ಪನ ಇತ್ಯಾದಿ ವಿಶೇಷ ಚಿಕಿತ್ಸೆಗಳನ್ನು ಅವರಿಗೆ ಪರಿಚಯಿಸ ಲಾಯಿತು. ಹಾಗೆಯೇ ಅವರು ಆಯುರ್ವೇದ ಸಂಶೋಧನಾ ಕೇಂದ್ರ ಮತ್ತು ಆಯುರ್ವೇದ ಪಾರ್ಮಸಿಗೂ ಭೇಟಿ ನೀಡಿ ಆಯುರ್ವೇದದ ವಿನೂತನ ಅವಿಷ್ಕಾರಗಳ ವಿಷಯಗಳನ್ನು ತಿಳಿದುಕೊಂಡರು.
ಈ ಸಂದರ್ದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಕಾಂತ ಯು., ಆಸ್ಪತ್ರೆಯ ಮುಖ್ಯ ಅಧೀಕ್ಷಕ ಡಾ.ಮುರಳೀಧರ ಶರ್ಮಾ, ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ರವಿಶಂಕರ್ ಬಿ., ಪಾರ್ಮಸಿಯ ವ್ಯವಸ್ಥಾಪಕ ಡಾ.ಮುರಳೀಧರ ಆರ್., ರಸಶಾಸ್ತ್ರ ಹಾಗೂ ಬೈಷಜ್ಯಕಲ್ಪನ ವಿಭಾಗದ ಮುಖ್ಯಸ್ಥ ಡಾ.ಪ್ರಬಾಕರ ರೆಂಜಾಳ ಉಪಸ್ಥಿತರಿದ್ದರು. ವೈದ್ಯರಾದ ಡಾ. ರವಿಕೃಷ್ಣ ಎಸ್., ಡಾ.ಸಂದೇಶ್ ಕುಮಾರ್ ಸಹಕರಿಸಿದರು.