ಮೂಡುಬಿದಿರೆ: ಶಿರ್ತಾಡಿ ಶಾಲೆಗೆ ನೀರಿನ ಟ್ಯಾಂಕ್, ಶುದ್ಧೀಕರಣ ಯಂತ್ರ ಕೊಡುಗೆ
Update: 2017-02-18 18:33 IST
ಮೂಡುಬಿದಿರೆ, ಫೆ.18: ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆಗೆ ಶಿರ್ತಾಡಿ ಗ್ರಾ.ಪಂ.ನಿಂದ ರೂ.40 ಸಾವಿರ ವೆಚ್ಚದ ನೀರು ಶುದ್ಧೀಕರಿಸುವ ಯಂತ್ರ ಮತ್ತು 1 ಸಾವಿರ ಲೀಟರಿನ ಸಿಂಟ್ಯಾಕ್ಷನ್ನು ಶುಕ್ರವಾರ ಕೊಡಲಾಯಿತು.
ಶಾಲಾ ಹಳೆ ವಿದ್ಯಾರ್ಥಿ, ಉದ್ಯಮಿ ರಾಜೇಶ್ ರೂ.25 ಸಾವಿರ ವೆಚ್ಚದ ನೀರಿನ ಪಂಪು ಮತ್ತು ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಿದರು.
ನೀರು ಶುದ್ಧೀಕರಿಸುವ ಯಂತ್ರವನ್ನು ಶಿರ್ತಾಡಿ ಗ್ರಾ.ಪಂ. ಅಧ್ಯಕ್ಷೆ ಲತಾ ಹೆಗ್ಡೆ ಹಾಗೂ ಬಾವಿಯ ಪಂಪನ್ನು ದಾನಿ ರಾಜೇಶ್ ಉದ್ಘಾಟಿಸಿದರು.
ಶಾಲಾ ಮುಖ್ಯ ಶಿಕ್ಷಕಿ ತೆರೆಸಿಯಾ ಡಿಸೋಜ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷ ದಿನೇಶ್.ಜೆ.ಪಿ. ದಾನಿ ರಾಜೇಶ್ ಜೆ.ಪಿ.ಯವರನ್ನು ಗೌರವಿಸಿದರು.
ಸಿ.ಆರ್.ಪಿ. ಸ್ಟ್ಯಾನಿ ಇಲಾಖಾ ವತಿಯಿಂದ ಕೊಡುಗೆ ನೀಡಲು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಶಿರ್ತಾಡಿ ಗ್ರಾ.ಪಂ. ಉಪಾಧ್ಯಕ್ಷ, ಸದಸ್ಯರು, ಎಸ್.ಡಿ.ಎಂ.ಸಿ. ಸದಸ್ಯರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.