ಕಾಸರಗೋಡು: ಒಂದೇ ಕುಟುಂಬದ ಮೂವರು ಮಕ್ಕಳು ನೀರುಪಾಲು
Update: 2017-02-18 19:38 IST
ಕಾಸರಗೋಡು, ಫೆ.18: ಒಂದೇ ಕುಟುಂಬದ ಮೂವರು ಮಕ್ಕಳು ನೀರು ಪಾಲಾದ ಘಟನೆ ಅಡ್ಯನಡ್ಕ ಸಮೀಪದ ಕೊಂಬರಬೆಟ್ಟು ಕೊಳದಲ್ಲಿ ಸಂಭವಿಸಿದೆ.
ನೀರುಪಾಲಾದವರನ್ನು ಮುಮ್ತಾಝ್ (10), ಫಾತಿಮತ್ ಫಸೀಲ (11), ಫಿದಾ ಅಮಿನ (7) ಎಂದು ಗುರುತಿಸಲಾಗಿದೆ.
ಮಮ್ತಾಝ್, ಆಸ್ಮಾ ಮತ್ತು ಕಾಸೀಮ್ ದಂಪತಿಗಳ ಪುತ್ರಿಯಾಗಿದ್ದಾರೆ. ಪಾತಿಮತ್ ಫಸೀಲ್ ಹಾಗೂ ಫಿದಾ ಅಮಿನ್, ಜೋಹಾರ ಮತ್ತು ಆಸೀಮ್ ದಂಪತಿಗಳ ಪುತ್ರಿಯರಾಗಿದ್ದಾರೆ ಎಂದು ಗುರುತಿಸಲಾಗಿದೆ.
ಇವರು ಕೊಳದಲ್ಲಿ ಸ್ನಾನ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬದಿಯಡ್ಕ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.