×
Ad

ವಕ್ವಾಡಿಯಲ್ಲಿ ಫೆ.19ಕ್ಕೆ ಯುವ ಸಂಭ್ರಮ

Update: 2017-02-18 20:54 IST

ಕುಂದಾಪುರ, ಫೆ.18: ಯುವಶಕ್ತಿ ಮಿತ್ರಮಂಡಲ ಹೆಗ್ಗಾರ್‌ಬೈಲು ವಕ್ವಾಡಿ ಇದರ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಯುವ ಸಂಭ್ರಮ-2017 ವಿವಿದ ಕಾರ್ಯಕ್ರಮಗಳೊಂದಿಗೆ ಸಂಪನ್ನ ಗೊಳ್ಳಲಿದೆ ಎಂದು ಮಿತ್ರಮಂಡಲದ ಪ್ರಕಟಣೆ ತಿಳಿಸಿದೆ.

ಬೆಳಗ್ಗೆ 9ಕ್ಕೆ ಯುವ ಬೈಕ್ ರ್ಯಾಲಿ, 10ಕ್ಕೆ ಯುವಶಕ್ತಿ ಕ್ರೀಡೋತ್ಸವ, ಸಂಜೆ 5ಕ್ಕೆ ಯುವಶಕ್ತಿ ಡ್ರಾಮ ಜೂನಿಯರ್ಸ್‌ ಸ್ಪರ್ಧೆ, ರಾತ್ರಿ 8ಕ್ಕೆ ಯುವಸ್ಪೂರ್ತಿ ಪುರಸ್ಕಾರ ಪ್ರದಾನ ಹಾಗೂ ಱಯಂತಾ ಆತ್ ಕಾಂಬಾೞಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತ ಮರವಂತೆಯ ಭುಜಂಗ ಕೊರಗ, ಸಾಹಿತ್ಯ ರತ್ನ ಪ್ರಶಸ್ತಿ ಪುರಸ್ಕೃತ ಕುಂದಾಪುರದ ಶಿಕ್ಷಕಿ ರತ್ನಾ, ಅಂತಾರಾಷ್ಟ್ರೀಯ ಕ್ರೀಡಾಪಟು ಗಣೇಶ ಪೂಜಾರಿ ಇವರಿಗೆ ಯುವ ಸ್ಪೂರ್ತಿ ಪುರಸ್ಕಾರ ಪ್ರದಾನ ಮಾಡಲಾಗುವುದು. ಪ್ರತೀಕ್ಷಾ ಆಚಾರ್ಯ ಹಾಗೂ ಆದಿತ್ಯ ಇವರನ್ನು ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಅರಣ್ಯ ಸಚಿವ ರಮಾನಾಥ ರೈ, ಕುಂದಾಪುರ ತಾಪಂ ಅಧ್ಯಕ್ಷೆ ಜಯಶ್ರೀ ಮೊಗವೀರ, ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪ್‌ಚಂದ್ರ ಶೆಟ್ಟಿ, ಜಿಪಂ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ, ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News