×
Ad

ಗಡಿ ಗೋಡೆ ವಿರೋಧಿಸಿ ಮೆಕ್ಸಿಕೊದಲ್ಲಿ ಮಾನವ ಗೋಡೆ

Update: 2017-02-18 21:06 IST

ಸಿಯುಡಾಡ್ ಜುವಾರೆಝ್ (ಮೆಕ್ಸಿಕೊ), ಫೆ. 18: ಅಮೆರಿಕ ಮತ್ತು ಮೆಕ್ಸಿಕೊ ದೇಶಗಳ ಗಡಿಯಲ್ಲಿ ಬೃಹತ್ ಗೋಡೆಯನ್ನು ನಿರ್ಮಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿರ್ಧಾರವನ್ನು ಪ್ರತಿಭಟಿಸಿ ಸಾವಿರಾರು ಮೆಕ್ಸಿಕೊ ಪ್ರಜೆಗಳು ಗಡಿಯಲ್ಲಿ ಶುಕ್ರವಾರ ಪರಸ್ಪರರ ಕೈಹಿಡಿದು ‘ಮಾನವ ಗೋಡೆ’ಯೊಂದನ್ನು ನಿರ್ಮಿಸಿದರು.

ಸ್ಥಳೀಯ ಸರಕಾರಿ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳು ಈ ಮಾನವ ಗೋಡೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ಗಡಿ ಪಟ್ಟಣ ಸಿಯುಡಾಡ್ ಜುವಾರೆಝ್‌ನಲ್ಲಿ ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಹೂವುಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News