×
Ad

ಮದುವೆ ನಿರಾಕರಣೆ: ಯುವತಿ ಆತ್ಮಹತ್ಯೆ

Update: 2017-02-18 21:15 IST

ಮಲ್ಪೆ, ಫೆ.18: ಪ್ರಿಯಕರ ಮದುವೆ ನಿರಾಕರಿಸಿದ ಚಿಂತೆಯಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುತೋನ್ಸೆ ಗ್ರಾಮದ ನೇಜಾರು ರಾಜೀವನಗರ ಎಂಬಲ್ಲಿ ಫೆ.17ರಂದು ನಡೆದಿದೆ.

ಮೃತರನ್ನು ನೇಜಾರು ರಾಜೀವನಗರದ ಉಪೇಂದ್ರ ಆಚಾರ್ಯ ಹಾಗೂ ವೇದಾವತಿ ದಂಪತಿಯ ಪುತ್ರಿ ಹಾಗೂ ಅಜ್ಜರಕಾಡು ಸರಕಾರಿ ಮಹಿಳಾ ಕಾಲೇಜಿನ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ರಾಜೇಶ್ವರಿ(19) ಎಂದು ಗುರುತಿಸಲಾಗಿದೆ.

ಸಂಜೆ 6:30ರ ಸುಮಾರಿಗೆ ವೇದಾವತಿ ಎಳನೀರು ತರಲು ಅಂಗಡಿಗೆ ಹೋಗಿದ್ದ ಸಮಯ ಮನೆಯಲ್ಲಿ ಒಬ್ಬಳೇ ಓದುತ್ತಿದ್ದ ರಾಜೇಶ್ವರಿ ಮನೆಯ ಎದುರಿನ ಬಾಗಿಲಿಗೆ ಚಿಲಕ ಹಾಕಿ ಮಲಗುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ 7ಗಂಟೆಗೆ ತಾಯಿ ಅಂಗಡಿಯಿಂದ ವಾಪಾಸ್ಸು ಮನೆ ಬಂದಾಗ ಈ ವಿಷಯ ತಿಳಿಯಿತು.

 ರಾಜೇಶ್ವರಿ ಪವನ್ ಎಂಬಾತನ್ನು ಪ್ರೀತಿಸುತ್ತಿದ್ದು, ಎರಡು ದಿನದ ಹಿಂದೆ ಪವನ್‌ಗೆ ಫೋನ್ ಕರೆ ಮಾಡಿದ್ದ ಈಕೆ, ಆತನಲ್ಲಿ ಮದುವೆ ವಿಚಾರ ತಿಳಿಸಿ ದ್ದಳು. ಅದಕ್ಕೆ ಆತ ಱನಾನು ನಿನ್ನನ್ನು ಮದುವೆ ಆಗುವುದಿಲ್ಲ, ನೀನು ಬೇಕಾದರೆ ಸಾಯಿೞ ಎಂದು ಹೇಳಿದ್ದನು. ಈ ವಿಚಾರವನ್ನು ರಾಜೇಶ್ವರಿ ತಾಯಿ ಬಳಿ ಹೇಳಿದ್ದಳು. ಇದೇ ಕಾರಣದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಸಾವಿಗೆ ಪವನ್ ದುಷ್ಪ್ರೇರಣೆಯೇ ಕಾರಣ ಎಂದು ವೇದಾವತಿ ದೂರಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News