ಉಡುಪಿ: ವಿಕಲಚೇತನರಿಂದ ಅರ್ಜಿ ಆಹ್ವಾನ
ಉಡುಪಿ, ಫೆ.18: ಅಲಿಮ್ಕೋ ಆಫ್ ಇಂಡಿಯಾ ಸಂಸ್ಥೆ ತಮ್ಮ ಸಿಎಸ್‌ಆರ್ ನಿಧಿಯಲ್ಲಿ ಉಡುಪಿ ಜಿಲ್ಲೆಯ ಅರ್ಹ ವಿಕಲಚೇತನರಿಗೆ ಸಾಧನ ಸಲಕರಣೆ ಗಳನ್ನು ವಿತರಿಸಲು ಸ್ಕೃಿನೀಂಗ್ ಶಿಬಿರಗಳನ್ನು ಜಿಲ್ಲಾಡಳಿತ, ಜಿಲ್ಲಾ ವಿಕಲಚೇತನರ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಇಲಾಖೆ ಉಡುಪಿ ಮತ್ತು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಉಡುಪಿ ಇವರ ಸಹಕಾರದೊಂದಿಗೆ ನಡೆಸಲಿದ್ದಾರೆ.
ಶಿಬಿರದಲ್ಲಿ ಈಗಾಗಲೇ ನಡೆಸಲಾದ ಸಮೀಕ್ಷೆಯಲ್ಲಿ ಸಾಧನ ಸಲಕರಣೆಗೆ ಬೇಡಿಕೆ ಸಲ್ಲಿಸಿರುವ ವಿಕಲಚೇತನರು ಹಾಗೂ ಸಾಧನ ಸಲಕರಣೆಗಳ ಅವಶ್ಯಕತೆ ಇರುವವರು ಅಗತ್ಯ ದಾಖಲಾತಿಗಳೊಂದಿಗೆ ಹಾಜರಾಗುವಂತೆ ತಿಳಿಸಲಾಗಿದೆ.
ಸಾಧನ ಸಲಕರಣೆ ವಿತರಣೆ ಪೂರ್ವಭಾವಿ ತಪಾಸಣಾ ಶಿಬಿರವನ್ನು ಕಾರ್ಕಳ ವ್ಯಾಪ್ತಿಯ ವಿಕಲಚೇತನರಿಗೆ ಫೆ.21ರಂದು ಬೆಳಿಗ್ಗೆ 9:30ರಿಂದ ಮಧ್ಯಾಹ್ನ 1:00 ರವರೆಗೆ ಕಾರ್ಕಳ ತಾಪಂ ಸಭಾಭವನದಲ್ಲಿ, ಕುಂದಾಪುರ ವ್ಯಾಪ್ತಿಯ ವಿಕಲಚೇತನರಿಗೆ ಫೆ.22ರಂದು ಬೆಳಗ್ಗೆ 10:00ರಿಂದ 3:00ರವರೆಗೆ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರದಲ್ಲಿ ಹಾಗೂ ಉಡುಪಿ ವ್ಯಾಪ್ತಿಯ ವಿಕಲಚೇತನರಿಗೆ ಫೆ.23ರಂದು ಬೆಳಿಗ್ಗೆ 9:00ರಿಂದ ಅಪರಾಹ್ನ 1:00 ರವರೆಗೆ ಅಜ್ಜರಕಾಡಿನ ಜಿಲ್ಲಾ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದೆ.
ಈ ಶಿಬಿರದಲ್ಲಿ ವಿಕಲಚೇತನರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಲು ಆಯ್ಕೆ ನಡೆಯಲಿದೆ ಹಾಗೂ ಮುಂದಿನ ಹಂತದಲ್ಲಿ ಗುರುತಿಸಲಾದ ಸಾಧನ ಸಲಕರಣೆಗಳನ್ನು ವಿತರಿಸಲಾಗುವುದು.
ಶಿಬಿರದಲ್ಲಿ ಭಾಗವಹಿಸುವವರು ವಿಕಲಚೇತನರ ವೈದ್ಯಕೀಯ ಪ್ರಮಾಣಪತ್ರ, ವಿಕಲಚೇತನರ ಗುರುತುಚೀಟಿ, ಪಾಸ್‌ಪೋರ್ಟ್ ಅಳತೆಯ ಪೋಟೋ-2, ಆಧಾರ ಕಾರ್ಡ್, ರೇಶನ್ ಕಾರ್ಡ್, ಓಟರ್ ಐಡಿ/ಚುನಾವಣಾ ಗುರುತು ಚೀಟಿ, ಜಾತಿ ಪ್ರಮಾಣ ಪತ್ರ (ಪ.ಜಾತಿ/ಪಂಗಡದವರಾದಲ್ಲಿ ಮಾತ್ರ), ಆದಾಯ ಪ್ರಮಾಣ ಪತ್ರ (ಆದಾಯದ ಮಿತಿ: ವಾರ್ಷಿಕ ಆದಾಯ 1,80,000 ರೂ. ಒಳಗೆ ಇರಬೇಕು) ದಾಖಲೆಗಳ ಪ್ರತಿಯನ್ನು ತರಬೇಕು.
ಗುರುತಿಸಲಾದ ಫಲಾನುಭವಿಗಳಿಗೆ ಮುಂದಿನ ಹಂತದಲ್ಲಿ ಶ್ರವಣಸಾಧನ (ಹಿಯರಿಂಗ್ ಏಯ್ದ), ಕೃತಕ ಕಾಲು, ಕ್ಯಾಲಿಪರ್, ಕಂಕುಳ ದೊಣ್ಣೆ ಮತ್ತು ಎಲ್ಬೋ ಕ್ರಚಸ್, ರೊಲೇಟರ್ಸ್, ಊರುಗೋಲು, ಗಾಲಿಕುರ್ಚಿ(ವೀಲ್ ಚೇರ್) ಮತ್ತು ಹೋಯ್‌ಸ್ಟಿಕ್ ಆಪರೇಟೆಡ್ ಗಾಲಿಕುರ್ಚಿ, ತ್ರಿಚಕ್ರ ಸೈಕಲ್, ಬ್ಯಾಟರಿಚಾಲಿತ ತ್ರಿಚಕ್ರ ಸೈಕಲ್, ಅಂಧರಿಗೆ ಸ್ಮಾರ್ಟ್ ಕೇನ್/ಬ್ರೈಲ್ ಕಿಟ್/ಟ್ಯಾಬ್ಲೆಟ್, ಕುಷ್ಠರೋಗ ಪೀಡಿತರಿಗೆ ಹಾಗೂ ಬುದ್ದಿಮಾಂದ್ಯ ಮಕ್ಕಳಿಗೆ ಸಾಧನ ಸಲಕರಣೆಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ವಿಕಲಚೇತನರ ಸಬಲೀಕರಣ ಇಲಾಖೆ (0820-2574810), ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ (9164276061)ವನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.