×
Ad

ಸವಾಲು ಎದುರಿಸಲು ಯುವಜನಾಂಗ ಸಿದ್ಧರಾಗಬೇಕು: ಟಿ.ವಿ. ಮೋಹನ್‌ದಾಸ್ ಪೈ

Update: 2017-02-18 22:46 IST

ಮಂಗಳೂರು, ಫೆ. 18: ಸಮಾಜವು ನಿರೀಕ್ಷೆಗೂ ಮೀರಿ ತ್ವರಿತ ಗತಿಯಲ್ಲಿ ಬದಲಾವಣೆಗೊಳ್ಳುತ್ತಿದೆ. ಹಾಗಾಗಿ ಭವಿಷ್ಯತ್ತಿನ ಹೊಸ ಸವಾಲುಗಳನ್ನು ಎದುರಿಸಲು ಯುವಜನರು ಸಿದ್ಧರಾಗಬೇಕು ಎಂದು ಕಾರ್ಪೊರೇಟ್ ಸಲಹೆಗಾರ ಟಿ.ವಿ. ಮೋಹನ್‌ದಾಸ್ ಪೈ ಹೇಳಿದರು.

ವಿಶ್ವ ಕೊಂಕಣಿ ಕೇಂದ್ರ ಪ್ರವರ್ತಿತ ವಿದ್ಯಾರ್ಥಿ ವೇತನ ನಿಧಿಯ ಲಾನುಭವಿಗಳಿಂದ ಸ್ಥಾಪನೆಯಾದ ವಿಶ್ವ ಕೊಂಕಣಿ ಅಲ್ಯುಮ್ನಿ ಅಸೋಸಿಯೇಶನ್ ಸ್ಧಳೀಯ ವಿದ್ಯಾರ್ಥಿಗಳು ಮತ್ತು ಯುವಜನರಿಗಾಗಿ ನಗರದ ಟಿ.ವಿ. ರಮಣ್ ಪೈ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ‘ಪ್ರೇರಣಾ’ ಸಮಾವೇಶದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ಈಗಲೂ ಜಾಗತೀಕರಣ ವಿರೋಧಿ ನಿಲುವು ಕಂಡು ಬರುತ್ತಿದೆ. ಅಮೆರಿಕಾ, ಬ್ರಿಟನ್ ಮತ್ತಿತರ ದೇಶಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ. ಇದರ ಜತೆಗೆ ಅಟೊಮೇಶನ್ ಮತ್ತು ರೋಬೊಟ್ ತಂತ್ರಜ್ಞಾನದ ಅನ್ವಯಿಸುವಿಕೆ ವ್ಯಾಪಕವಾಗಿ ನಡೆಯುತ್ತಿದೆ. ಹಾಗಾಗಿ ಯುವಜನರಿಗೆ ದೇಶ-ವಿದೇಶಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ ಎಂದು ಮೋಹನ್‌ದಾಸ್ ಪೈ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಬ್ರಿ. ಸಿ.ಎಂ.ಎ್. ಪ್ರಭು ‘ನನ್ನ ಅಜ್ಜ ಮತ್ತು ತಂದೆ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರು. ಸೈನ್ಯಕ್ಕೆ ಸೇರುವಾಗ ಹೆಚ್ಚು ಓದಿರಲಿಲ್ಲ. ಆದರೆ ಸೈನ್ಯಕ್ಕೆ ಸೇರ್ಪಡೆಗೊಂಡ ಬಳಿಕ ಬಹಳಷ್ಟನ್ನು ಕಲಿತಿದ್ದೇನೆ. ಯಾವುದೇ ಕ್ಷೇತ್ರದಲ್ಲಿ ಕಠಿಣ ದುಡಿಮೆ ಅತ್ಯಗತ್ಯ. ಪರಿಶ್ರಮವು ನಮಗೆ ಪ್ರತಿಲವನ್ನು ಒದಗಿಸುತ್ತದೆ ಎಂದರು.

 ಸಿಎನ್‌ಬಿಸಿ ಟಿವಿ 18 ಇದರ ಸಂಪಾದಕಿ ಸೋನಿಯಾ ಶೆಣೈ, ಐಎ್ಎಂಆರ್ ಕ್ಯಾಪಿಟಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕ್ಷಮಾ ಫೆರ್ನಾಂಸ್, ಕೊಕೋ ಕೋಲಾ ಸಂಸ್ಥೆಯ ಇಂಡಿಯಾ ಮತ್ತು ಸೌತ್ ವೆಸ್ಟ್ ಏಶಿಯಾ ವಿಭಾಗದ ಅಧ್ಯಕ್ಷ ವೆಂಕಟೇಶ್ ಕಿಣಿ, ಹೊಸ ದಿಲ್ಲಿಯ ಭರೋಸಾ ಕ್ಲಬ್‌ನ ಸ್ಥಾಪಕ ಪ್ರಕಾಶ್ ಪೈ, ಮಂಗಳೂರಿನ ಎ.ಜೆ. ಆಸ್ಪತ್ರೆಯ ಯುರಾಲಜಿ ವಿಭಾಗದ ಮುಖ್ಯಸ್ಥ ಡಾ. ಸುನಿಲ್ ಶೆಣೈ, ಇಂಡೊಕೊ ರೆಮಿಡೀಸ್ ಕಂಪೆನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಬಾಂಬೋಲ್ಕರ್ ತಮ್ಮ ಬದುಕಿನ ಅನುಭವಗಳನ್ನು ಹಂಚಿಕೊಂಡರು.

ವಿಶ್ವ ಕೊಂಕಣಿ ಅಲ್ಯುಮ್ನಿ ಅಸೋಸಿಯೇಶನ್‌ನ ಅಧ್ಯಕ್ಷ ದಿನೇಶ್ ಕೆ. ಪೈ ಸ್ವಾಗತಿಸಿದರು. ಮಿಜಿ ಅಧ್ಯಕ್ಷ ಲೆನಿಟಾ ಮಿನೇಜಸ್, ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಪ್ರದೀಪ್ ಜಿ. ಪೈ, ಸಂದೀಪ್ ಶೆಣೈ, ವೆಂಕಟೇಶ ಬಾಳಿಗಾ, ಗಿರಿಧರ್ ಕಾಮತ್, ಗುರದತ್ ಬಾಳಿಗಾ ಬಂಟ್ವಾಳ್‌ಕರ್ ಮುಂತಾದವರು ಉಪಸ್ಥಿತರಿದ್ದರು.
ವೈಭವ್ ಡಿಸೋಜ ಮತ್ತು ನವಮಿ ಆರ್. ಕಿಣಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News