ಮಂಗಳೂರು: ಕಾರಿಗೆ ಲಾರಿ ಢಿಕ್ಕಿ
Update: 2017-02-18 22:47 IST
ಮಂಗಳೂರು, ಫೆ.18: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆದ ಘಟನೆ ತೆಂಕ ಎಕ್ಕಾರುವಿನಲ್ಲಿ ನಡೆದಿದೆ.
ಪ್ರದೋಪ್ ಎಂಬವರು ತನ್ನ ಕಾರಿನಲ್ಲಿ ಕಟೀಲು ದೇವಸ್ಥಾನದಿಂದ ಬರುತ್ತಿರುವಾಗ ತೆಂಕ ಎಕ್ಕಾರುವಿನಲ್ಲಿ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿದೆ.
ಲಾರಿಯನ್ನು ಸಾರ್ವಜನಿಕರು ತಡೆದು ನಿಲ್ಲಿಸಿ ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೆ ಮರಳನ್ನು ಗುರುಪುರ ಧಕ್ಕೆಯಿಂದ ಅಕ್ರಮವಾಗಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.