ವೈದ್ಯಕೀಯ ವಿದ್ಯಾರ್ಥಿ ನಾಪತ್ತೆ
Update: 2017-02-18 23:37 IST
ಮಣಿಪಾಲ, ಫೆ.18: ಮಣಿಪಾಲ ವಿವಿಯ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಕೌಶಾಂತ್ ದುಬೆ ನಾಪತ್ತೆಯಾಗಿದ್ದಾರೆ.
ಮಣಿಪಾಲ ವಿವಿಯ ನೆಹರು ಹಾಸ್ಟೆಲ್‌ನ ರೂಮ್ ನಂ.ಇ-125ರಲ್ಲಿ ವಾಸ್ತವ್ಯವಿದ್ದ ಕೌಶಾಂತ್ ದುಬೆ ಫೆ.15ರಂದು ಹಾಸ್ಟೆಲ್‌ನಿಂದ ಹೋದವರು ಈತನಕ ವಾಪಸ್ಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.