×
Ad

ಕೊಲ್ಲೂರು: ಇಬ್ಬರು ಬಾಲಕರು ನಾಪತ್ತೆ

Update: 2017-02-18 23:38 IST

ಕೊಲ್ಲೂರು, ಫೆ.18: ಆಟ ಆಡಲು ಹೋದ ಇಬ್ಬರು ಬಾಲಕರು ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಮಾರಣಕಟ್ಟೆ ಸಮೀಪದ ದೂಪದ ಹಾಡಿ ಎಂಬಲ್ಲಿ ಫೆ.15ರಂದು ಸಂಜೆ ವೇಳೆ ನಡೆದಿದೆ.

ದೂಪದಹಾಡಿಯ ಸುರೇಶ ಭಂಡಾರಿ ಎಂಬವರ ಮಗ ರಾಜೇಶ(14) ಮತ್ತು ಚಿತ್ತೂರು ಗ್ರಾಮದ ಹಕ್ಲುಮನೆ ನಿವಾಸಿ ಭಾಸ್ಕರ ದೇವಾಡಿಗ ಎಂಬ ವರ ಮಗ ರೋಹಿತ್(15) ನಾಪತ್ತೆಯಾದ ಬಾಲಕರು. ಇವರು ಮನೆ ಸಮೀಪ ಆಟ ಆಡಲು ಹೋದವರು ಈ ತನಕ ಮನೆಗೆ ಬಾರದೆ ನಾಪತ್ತೆಯಾಗಿದ್ದು, ಇವರಿಬ್ಬರು ಅವರಾಗಿಯೇ ಹೋಗಿರಬಹುದು ಅಥವಾ ಬೇರೆ ಯಾರದಾರೂ ಕರೆದುಕೊಂಡು ಹೋಗಿರಬಹುದು ಎಂದು ಪೋಷಕರು ಶಂಕಿಸಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News