×
Ad

ಮಂದರ್ತಿ: ಅನುದಾನದ ಚೆಕ್ ವಿತರಣೆ

Update: 2017-02-18 23:42 IST

ಮಂದರ್ತಿ: ಅನುದಾನದ ಚೆಕ್ ವಿತರಣೆ
ಮಂದರ್ತಿ, ಫೆ.18: ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ, ನಮ್ಮೂರ ಶಾಲೆ ನಮ್ಮೂರ ಯುವಜನರು ಯೋಜನೆ ಯಲ್ಲಿ ಶ್ರೀ ಮಲ್ಲಿಕಾರ್ಜುನ ಕುಡುಬಿ ಜನಪದ ಕಲಾಸಂಘ ಹೆಗ್ಗುಂಜೆ, ಮಂದರ್ತಿ ಸಂಘದ ಕಾರ್ಯ ಚಟುವಟಿಕೆಯನ್ನು ಗುರುತಿಸಿ ಒಂದು ಲಕ್ಷ ರೂ. ಅನುದಾನವನ್ನು ನೀಡಲಾಗಿದೆ.

 ಅನುದಾನದ ಚೆಕ್‌ನ್ನು ರಾಜ್ಯ ಮೀನುಗಾರಿಕೆ, ಯುವಸಬಲೀಕರಣ ಹಾಗೂ ಕ್ರೀಡಾ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಅವರು ಇತ್ತೀಚೆಗೆ ಸಂಘಕ್ಕೆ ಹಸ್ತಾಂತರಿಸಿದರು.

 ಅನುದಾನವನ್ನು ಬಿಡುಗಡೆ ಮಾಡಿದ ಸಚಿವ ಪ್ರಮೋದ್ ಮದ್ವರಾಜ್ ಅವರಿಗೆ ಹೆಗ್ಗುಂಜೆ ಶ್ರೀ ಮಲ್ಲಿಕಾರ್ಜುನ ಕುಡುಬಿ ಜನಪದ ಕಲಾ ಸಂಘದ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News