×
Ad

ಫೆ.19ರಿಂದ ಸಚಿವ ಪ್ರಮೋದ್ ಮಧ್ವರಾಜ್ ಪ್ರವಾಸ

Update: 2017-02-18 23:44 IST

ಉಡುಪಿ, ಫೆ.18: ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಫೆ.19 ಮತ್ತು 20ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

 ನಾಳೆ ಫೆ.19ರ ಬೆಳಗ್ಗೆ 10:30ಕ್ಕೆ ನಿಟ್ಟೂರು ಸರಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ, 11:00ಕ್ಕೆ ಬ್ರಹ್ಮಾವರದ ಹಂದಾಡಿ ಬೇಳೂರುಜೆಡ್ಡಿನ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನ ನೇಮೋತ್ಸವ ಪ್ರಯುಕ್ತ ಧಾರ್ಮಿಕ ಸಭೆ, ಸಂಜೆ 5:00ಕ್ಕೆ ಕಟೀಲಿನಲ್ಲಿ ಕಾರ್ಯಕ್ರಮ, 6:00ಕ್ಕೆ ಬ್ರಹ್ಮಾವರ ಮಟಪಾಡಿಯಲ್ಲಿ ಕಾರ್ಯಕ್ರಮ, 6:30ಕ್ಕೆ ಮಣಿಪಾಲ ಗ್ರೀನ್ಸ್‌ನಲ್ಲಿ ಆಯೋಜಿಸುವ ಕ್ಯಾನ್ಸರ್‌ಗಾಗಿ ನಡಿಗೆಯ ಸಮಾರೋಪ, ರಾತ್ರಿ 8:00ಕ್ಕೆ ಕುಂದಾಪುರ ವಕ್ವಾಡಿ ಪಂಚಾಯತ್ ವಠಾರದಲ್ಲಿ ಯುವಶಕ್ತಿ ಮಿತ್ರಮಂಡಲದ ವಿಂಶತಿ ಉತ್ಸವದ ಱಯುವ ಸಂಭ್ರಮ-2017ೞಕಾರ್ಯಕ್ರಮ.

  ಫೆ.20ರ ಸೋಮವಾರ ಬೆಳಗ್ಗೆ 10:00ಕ್ಕೆ ಉಡುಪಿ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ 'ಕವಿ ಸರ್ವಜ್ಞ ಜಯಂತಿ' ಆಚರಣೆ, 11:00ಕ್ಕೆ ಮಣಿಪಾಲದ ಜಿಪಂ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ, ಬಳಿಕ ಮಂಗಳೂರು ಮೂಲಕ ಬೆಂಗಳೂರಿಗೆ ಪ್ರಯಾಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News