ಮಂಗಳೂರು : ಹತ್ಯೆಗೆ ಸಂಚು ರೂಪಿಸಿದ್ದ 6 ಮಂದಿ ಶಂಕಿತರ ಬಂಧನ
ಮಂಗಳೂರು, ಫೆ.19: ಶ್ರೀಮಂತ ವ್ಯಕ್ತಿಯೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದ 6 ಮಂದಿ ಶಂಕಿತರನ್ನು ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ 2 ಪಿಸ್ತೂಲ್, ಸಜೀವ ಗುಂಡು, ಚೂರಿಯನ್ನು ವಶಪಡಿಸಲಾಗಿದೆ ಎಂದು ಡಿಸಿಪಿ ಕೆ.ಎಂ.ಶಾಂತರಾಜು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಶಂಕಿತ ಆರೋಪಿಗಳಾದ ಸಫ್ವಾನ್ ಹುಸೈನ್, ಮುಹಮ್ಮದ್ ಫೈಝಲ್, ಇಬ್ರಾಹೀಮ್ ಶೇಖ್, ಅಬ್ದುಲ್ ನಾಸಿರ್, ಶಂಸುದ್ದೀನ್, ಉಮ್ಮರ್ ಫಾರೂಕ್ , ಮುಹಮ್ಮದ್ ಅನ್ಸಾರ್ ಬಂಧಿತರು. ಬಂಧಿತ ಸಫ್ವಾನ್ ಹುಸೈನ್ ಗೆ ಈ ಹಿಂದೆ ಗೂಂಡ ಕಾಯ್ದೆ ಜಾರಿಗೊಳಿಸಲಾಗಿತ್ತು. ಅಲ್ಲದೆ ಮುಹಮ್ಮದ್ ಅನ್ಸಾರ್ ಹೊರತುಪಡಿಸಿ ಇತರರು ವಿವಿಧ ಪ್ರಕರಣದ ಮೇಲೆ ಜಾಮೀನಿನಿಂದ ಹೊರಬಂದಿದ್ದರು. ಆರೋಪಿಗಳಿಗೆ ನಾಡ ಪಿಸ್ತೂಲ್ ಸಿಗುವಂತೆ ಸಹಕರಿಸಿದವರ ಮೇಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಖಾಲಿಯ ರಫೀಕ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಬಂಧನವಾಗಿಲ್ಲ. ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು. ಪ್ರತಾಪ್ ಪೂಜಾರಿ ಹತ್ಯೆ ಪ್ರಕರಣ ಆರೋಪಿಗಳ ಗುರುತು ಪತ್ತೆಯಾಗಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸುವುದಾಗಿ ಅವರು ಹೇಳಿದರು.