ಹರ್ಯಾಣ,ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ಗಳ ಶೌಚಕೋಣೆಗಳಿಲ್ಲದ ಮನೆಗಳಲ್ಲಿ ನಿಖಾಹ ಕೂಡ ಇಲ್ಲ

Update: 2017-02-19 10:00 GMT
ಮೌಲಾನಾ ಮಹಮೂದ್ ಎ.ಮದನಿ

ಗುವಾಹಟಿ,ಫೆ,19: ಮನೆಯಲ್ಲಿ ಶೌಚಕೋಣೆಯಿಲ್ಲದಿದ್ದರೆ ಆ ಕುಟುಂಬವು ಮನೆಯ ಮಕ್ಕಳ ನಿಖಾಹ ಮಾಡುವಂತಿಲ್ಲ. ಶೌಚಕೋಣೆಯಿಲ್ಲದ ಮನೆಯಲ್ಲಿ ನಿಖಾಹ ನೆರವೇರಿಸದಿರಲು ಹರ್ಯಾಣ,ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ಗಳಲ್ಲಿಯ ವೌಲ್ವಿಗಳು ಮತ್ತು ಮುಫ್ತಿಗಳು ನಿರ್ಧರಿಸಿದ್ದಾರೆ.

ಈ ಮೂರು ರಾಜ್ಯಗಳಲ್ಲಿ ಮುಸ್ಲಿಮ್ ಮದುವೆಗಾಗಿ ಕುಟುಂಬವು ಶೌಚಕೋಣೆ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ ಮತ್ತು ಶೀಘ್ರವೇ ಇದು ಇಡೀ ದೇಶಕ್ಕೆ ಅನ್ವಯಿಸಲಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯರೂ ಆಗಿರುವ ಜಮೀಯತ್ ಉಲಮಾ-ಇ-ಹಿಂದ್‌ನ ಮಹಾ ಕಾರ್ಯದರ್ಶಿ ಮೌಲಾನಾ ಮಹಮೂದ್ ಎ.ಮದನಿ ಅವರು ತಿಳಿಸಿದರು.

ಇಲ್ಲಿ ಏರ್ಪಡಿಸಲಾಗಿದ್ದ ಅಸ್ಸಾಂ ನೈರ್ಮಲ್ಯ ಸಮ್ಮೇಳನದ ಉದ್ಘಾಟನೆ ಸಂದರ್ಭ ಮಾತನಾಡಿದ ಅವರು, ಶೌಚಕೋಣೆಗಳಿಲ್ಲದ ಮನೆಗಳಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸದಿರಲು ದೇಶಾದ್ಯಂತ ಎಲ್ಲ ಧಾರ್ಮಿಕ ನಾಯಕರು ನಿರ್ಧಾರ ಕೈಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಎರಡು ಬಗೆಯ ಶುದ್ಧಿಗಳಿವೆ. ಒಂದು ಬಾಹ್ಯ ಶುದ್ಧಿ,ಇನ್ನೊಂದು ಆಂತರಿಕ ಶುದ್ಧಿ. ಇವೆರಡೂ ಪರಸ್ಪರ ಸಂಬಂಧ ಹೊಂದಿವೆ. ನಮ್ಮ ಶರೀರವು ಶುದ್ಧವಾಗಿದ್ದರೆ ಮಾತ್ರ ನಾವು ಆಂತರಿಕ ಶುದ್ಧಿಯನ್ನು ಸಾಧಿಸಲು ಸಾಧ್ಯ ಎಂದು ಮದನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News