×
Ad

ಮುಸ್ಲಿಂ ಲೀಗ್ ನಾಯಕ ಇ.ಅಹ್ಮದ್‌ಗೆ ಸಂತಾಪ

Update: 2017-02-19 15:57 IST

ಮಂಗಳೂರು, ಫೆ.19: ರಾಷ್ಟ್ರೀಯ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ, ಸಂಸದ ಇ.ಅಹ್ಮದ್ ನಿಧನಕ್ಕೆ ದ.ಕ.ಜಿಲ್ಲಾ ಮುಸ್ಲಿಂ ಲೀಗ್ ಕಚೇರಿಯಲ್ಲಿ ಸಂತಾಪ ಸೂಚಕ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೆಂಟ್ರಲ್ ಮುಸ್ಲಿಂ ಕಮಿಟಿಯ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್, ಹಿರಿಯ ಆಡಳಿತ ಮುತ್ಸದ್ದಿಯಾಗಿದ್ದ ಇ.ಅಹ್ಮದ್ ಎಲ್ಲ ಪಕ್ಷದವರಿಂದಲೂ ಪ್ರಶಂಸಲ್ಪಟ್ಟಿದ್ದರು. ರೈಲ್ವೆ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದ ಅವರು ವಿದೇಶಗಳಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದರು ಎಂದರು.

ಜಿಲ್ಲಾ ಮುಸ್ಲಿಂ ಲೀಗ್ ಮಾಜಿ ಅಧ್ಯಕ್ಷ ಅಹ್ಮದ್ ಬಾವಾ ಉಳ್ಳಾಲ, ಜಿಲ್ಲಾಧ್ಯಕ್ಷ ಸಿ. ಅಹ್ಮದ್ ಜಮಾಲ್, ಪಕ್ಷದ ಮುಖಂಡರಾದ ಎಂ.ಶರೀಫ್, ಮುಸ್ತಾಫ ಬಿ.ಸಿ.ರೋಡ್, ಎಂ.ಕೆ.ಅಶ್ರಫ್, ಪಿ.ಅಬ್ದುಲ್ ರಹಿಮಾನ್ ಬಾವಾ, ಹಾಜಿ ಇಬ್ರಾಹೀಂ ಉಪಸ್ಥಿತರಿದ್ದರು.

ಹಾಜಿ ಮುಹಮ್ಮದ್ ಬಿ.ಎ.ಸ್ವಾಗತಿಸಿದರು. ಬಶೀರ್ ಉಳ್ಳಾಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News